Advertisement

ಮತ್ತೆ ಅಂಪಾಯರ್ ಜತೆ ಜಗಳವಾಡಿದ ಶಕೀಬ್ ಅಲ್ ಹಸನ್: ವಿಡಿಯೋ ನೋಡಿ

03:08 PM Jan 08, 2023 | Team Udayavani |

ಢಾಕಾ: ಬಾಂಗ್ಲಾದೇಶ ತಂಡದ ನಾಯಕ, ಪ್ರಸಿದ್ದ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅವರು ಫೀಲ್ಡ್ ನಲ್ಲಿ ತಮ್ಮ ಕೋಪದ ಕಾರಣದಿಂದಲೇ ಹಲವು ಬಾರಿ ಸುದ್ದಿಯಾದವರು. ಈ ಹಿಂದೆ ಕೋಪದಿಂದ ಅಂಪೈರ್ ಜೊತೆ ಜಗಳವಾಡಿದ್ದ, ವಿಕೆಟ್ ಗಳನ್ನು ಕಿತ್ತು ಹಾಕಿದ್ದ ಶಕೀಬ್ ಇದೀಗ ಮತ್ತೆ ಇಂಥದೇ ಕಾರಣದಿಂದ ಸುದ್ದಿಯಾಗಿದ್ದಾರೆ.

Advertisement

ಸದ್ಯ ನಡೆಯುತ್ತಿರುವ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ನಲ್ಲಿ ಶಕೀಬ್ ಅಲ್ ಹಸನ್  ಅಂಪಾಯರ್ ಜತೆ ರೇಗಾಡಿದ್ದಾರೆ. ಫಾರ್ಚೂನ್ ಬಾರಿಶಾಲ್ ಮತ್ತು ಸಿಲ್ಹೆಟ್ ಸ್ಟ್ರೈಕರ್ಸ್ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ:ನಿನ್ನನ್ನು ತುಂಬಾ ಪ್ರೀತಿಸುತ್ತೇನೆ.. 13 ವರ್ಷದ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದ 47 ವರ್ಷದ ಶಿಕ್ಷಕ.!

ಬಾರಿಶಾಲ್ ತಂಡದ ಪರ ಶಕೀಬ್ ಬ್ಯಾಟಿಂಗ್ ಮಾಡುತ್ತಿದ್ದರು. ವೇಗಿ ರೆಜೌರ್ ರೆಹಮಾನ್ ರಜಾ ಬೌನ್ಸರ್ ಎಸೆದರು. ಈ ವೇಳೆ ಅಂಪಾಯರ್ ವೈಡ್ ನೀಡುವ ಬದಲು ಬೌನ್ಸರ್ ಎಚ್ಚರಿಕೆ ನೀಡಿದರು. ಇದರಿಂದ ಕೆರಳಿದ ಶಕೀಬ್ ಕೂಡಲೇ ಲೈನ್ ಅಂಪಾಯರ್ ಕಡೆಗೆ ತೆರಳಿ ಮಾತುಕತೆ ನಡೆಸಿದರು. ಆದರೆ ಶಕೀಬ್ ಮನವಿಗೆ ಒಪ್ಪದ ಅಂಪಾಯರ್ ವೈಡ್ ನೀಡಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next