Advertisement

ಎಐಎಫ್ಎಫ್​ನ ನೂತನ ಪ್ರಧಾನ ಕಾರ್ಯದರ್ಶಿ ಶಾಜಿ ಪ್ರಭಾಕರನ್ ನೇಮಕ

11:25 PM Sep 03, 2022 | Team Udayavani |

ಹೊಸದಿಲ್ಲಿ: ನಿರೀಕ್ಷೆಯಂತೆ ದಿಲ್ಲಿ ಫ‌ುಟ್‌ಬಾಲ್‌ ಸಂಸ್ಥೆಯ ಅಧ್ಯಕ್ಷ ಶಾಜಿ ಪ್ರಭಾಕರನ್‌ ಅಖಿಲ ಭಾರತ ಫ‌ುಟ್‌ಬಾಲ್‌ ಫೆಡರೇಶನ್‌ನ (ಎಐಎಪ್‌ಎಫ್) ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

Advertisement

ದೀರ್ಘ‌ ಕಾಲದ ಆಡಳಿತ ಅನುಭವ ಎನ್ನುವುದು ಪ್ರಭಾಕರನ್‌ ಆಯ್ಕೆಯನ್ನು ಸುಗಮಗೊಳಿಸಿತು.

ಕಲ್ಯಾಣ್‌ ಚೌಬೆ ನೇತೃತ್ವದ ಎಐಎಫ್ಎಫ್ ನೂತನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳ ಲಾಯಿತು. ಸುನಂದೊ ಧರ್‌ ಉಪ ಪ್ರಧಾನ ಕಾರ್ಯದರ್ಶಿ ಆಗಿರುತ್ತಾರೆ.

ಐ.ಎಂ. ವಿಜಯನ್‌ ಅವರನ್ನು ತಾಂತ್ರಿಕ ಸಮಿತಿಯ ಚೇರ್ಮನ್‌ ಆಗಿ, ಶಬ್ಬೀರ್‌ ಅಲಿ ಅವರನ್ನು ಸಲಹಾ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next