Advertisement

ದುಬಾರಿ ವಾಚ್ ಸಾಗಾಟ: ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರುಖ್ ಖಾನ್ ಗಂಟೆಗಳ ಕಾಲ ವಿಚಾರಣೆ

04:40 PM Nov 12, 2022 | Team Udayavani |

ಮುಂಬೈ: ಕಳೆದ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ನಟ ಶಾರುಖ್ ಖಾನ್ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ತಡೆದ ಘಟನೆ ನಡೆದಿದೆ.

Advertisement

ಕೆಲವು ದುಬಾರಿ ವಾಚ್‌ ಗಳ ಬಗ್ಗೆ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ಶಾರುಖ್ ತಂಡವನ್ನು ಗಂಟೆಗಳ ಕಾಲ ತಡೆದರು. ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿ ನೀಡುವ ಮೊದಲು ಅವರು 6.83 ಲಕ್ಷ ರೂ ಕಸ್ಟಮ್ಸ್ ಸುಂಕವನ್ನು ಪಾವತಿಸಬೇಕಾಗಿತ್ತು ಎಂದು ಮೂಲಗಳು ತಿಳಿಸಿವೆ.

ಶಾರ್ಜಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಶಾರುಖ್ ಖಾನ್ ಹಿಂತಿರುಗುತ್ತಿದ್ದರು. ಖಾಸಗಿ ಜೆಟ್‌ ನಲ್ಲಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ರಲ್ಲಿ ಬಂದಿಳಿದಿದ್ದರು.

ಶಾರುಖ್ ಖಾನ್ ಮತ್ತು ಅವರ ಜೊತೆಗಿದ್ದವರು ಟರ್ಮಿನಲ್‌ ನಿಂದ ಹೊರಡುವಾಗ ಲಗೇಜ್‌ ನಲ್ಲಿ ಐಷಾರಾಮಿ ಕೈಗಡಿಯಾರಗಳು ಕಂಡುಬಂದಿವೆ.

ಇದನ್ನೂ ಓದಿ:ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಎರಡನೇ ಸ್ಥಾನದಲ್ಲಿ ಕರ್ನಾಟಕ: ಸಚಿವ ಸುಧಾಕರ್

Advertisement

ವರದಿಗಳ ಪ್ರಕಾರ, ಶಾರುಖ್ ಮತ್ತು ಅವರ ಮ್ಯಾನೇಜರ್ ಅವರನ್ನು ಅಧಿಕಾರಿಗಳು ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ಬಳಿಕ ಹೊರಡಲು ಅನುಮತಿ ನೀಡಿದ್ದರು. ಆದರೆ ಅವರ ಅಂಗರಕ್ಷಕ ಸೇರಿದಂತೆ ಕೆಲವು ಸದಸ್ಯರನ್ನು ಇಡೀ ರಾತ್ರಿ ವಿಚಾರಣೆಗಾಗಿ ಇರಿಸಲಾಗಿತ್ತು. ಅವರನ್ನು ಹೊರಡಲು ಬೆಳಿಗ್ಗೆ ಅನುಮತಿ ನೀಡಲಾಯಿತು.

ಸುಮಾರು 18 ಲಕ್ಷ ರೂ ಮೌಲ್ಯದ ಆರು ದುಬಾರಿ ವಾಚ್‌ ಗಳ ಪ್ಯಾಕೇಜಿಂಗ್‌ ಗಳು ಶಾರುಖ್ ಮತ್ತು ಅವರ ಜೊತೆಯಲ್ಲಿದ್ದವರ ಬ್ಯಾಗ್ ನಲ್ಲಿ ಕಂಡುಬಂದಿವೆ ಎಂದು ವರದಿಗಳು ತಿಳಿಸಿವೆ.

ಶಾರುಖ್ ಖಾನ್ ಅವರು ನಿನ್ನೆ ಶಾರ್ಜಾ ಇಂಟರ್‌ ನ್ಯಾಶನಲ್ ಬುಕ್ ಫೇರ್ 2022 ರಲ್ಲಿ ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next