ಗುವಾಹಾಟಿ: ಅಸ್ಸಾಂ ಸಿಎಂ ಹಿಮಾಂತ ಶರ್ಮಾ ಬಿಸ್ವಾ ಅವರಿಗೆ ಬೆಳಗ್ಗೆ 2 ಗಂಟೆಗೇ ಬಾಲಿವುಡ್ ನಟ ಶಾರುಖ್ ಖಾನ್ ಫೋನ್ ಮಾಡಿದ್ದಾರೆ.
ಜ.25ರಂದು ಬಿಡುಗಡೆಯಾಗಲಿರುವ “ಪಠಾಣ್’ ಸಿನೆಮಾಕ್ಕೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಖುದ್ದು ಅಸ್ಸಾಂ ಸಿಎಂ ಮಾಹಿತಿ ನೀಡಿದ್ದಾರೆ. ನಟನ ಮನವಿಗೆ ಸ್ಪಂದಿಸಿ, ಸೂಕ್ತ ರಕ್ಷಣೆ ನೀಡುವ ವಾಗ್ಧಾನ ಮಾಡಿರುವುದಾಗಿ ಹೇಳಿದ್ದಾರೆ.
ಶನಿವಾರವಷ್ಟೇ ಶಾರುಖ್ ಖಾನ್ ಯಾರು ಎಂದು ಬಿಸ್ವಾ ಪ್ರಶ್ನೆ ಮಾಡಿದ್ದರು. ಮೊದಲಿಗೆ ಶಾರುಖ್ ಅವರಿಂದ ಕರೆ ಬಂದಿಲ್ಲ ಎಂದಿದ್ದರು. ಇದೇ ವೇಳೆ, ಗುಜರಾತ್‌ನ ಸೂರತ್‌ನಲ್ಲಿ “ಪಠಾಣ್’ ಸಿನೆಮಾದ ಪೋಸ್ಟರ್‌ಗಳನ್ನು ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತರು ಹರಿದು ಹಾಕಿದ್ದಾರೆ.