Advertisement

ಶಹೀನ್‌ ಚಂಡಮಾರುತಕ್ಕೆ 13 ಮಂದಿ ಬಲಿ

10:55 PM Oct 04, 2021 | Team Udayavani |

ದುಬಾೖ/ಅಹ್ಮದಾಬಾದ್‌: ಒಮನ್‌ ಕರಾವಳಿಗೆ ರವಿವಾರ ಅಪ್ಪಳಿಸಿರುವ ಶಹೀನ್‌ ಚಂಡಮಾರುತವು ಈವರೆಗೆ 13 ಮಂದಿಯನ್ನು ಬಲಿಪಡೆದುಕೊಂಡಿದೆ.

Advertisement

ಗಂಟೆಗೆ 150 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುತ್ತಾ, ಭಾರೀ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಇರಾನ್‌ನಲ್ಲಿ ಐವರು ಮೀನುಗಾರರು ನಾಪತ್ತೆಯಾಗಿದ್ದು, ಆ ಪೈಕಿ ಇಬ್ಬರನ್ನು ರಕ್ಷಿಸಲಾಗಿದೆ.

ಚಂಡಮಾರುತಕ್ಕೂ ಮುನ್ನ ಮರಳು ಬಿರುಗಾಳಿ ಬೀಸಿದ್ದು, ಕಣ್ಣು, ಹೃದಯ ಹಾಗೂ ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಂದಾಗಿ 122 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗುಜರಾತ್‌ನಲ್ಲಿ ಈ ವರ್ಷ ಗರಿಷ್ಠ ಮಳೆ: ಕಳೆದ 30 ವರ್ಷಗಳಲ್ಲಿ ಪ್ರತಿ ವರ್ಷ ಗುಜರಾತ್‌ನಲ್ಲಿ ಸುರಿದಿದ್ದ ಸರಾಸರಿ ಮಳೆಗೆ ಹೋಲಿಸಿದರೆ, ಈ ವರ್ಷ ಅದರ ಶೇ.95ರಷ್ಟು ಮಳೆಪ್ರಮಾಣ ಈಗಾಗಲೇ ಆಗಿದೆ ಎಂದು ಅಲ್ಲಿನ ಎಸ್‌ಇಒಸಿ ಸಂಸ್ಥೆ ಹೇಳಿದೆ.

ಇದನ್ನೂ ಓದಿ:ಐವಿಎಫ್ ಮೂಲಕ 6 ಕರು ಸೃಷ್ಟಿ! ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ವೈಜ್ಞಾನಿಕ ಪ್ರಯೋಗ ಯಶಸ್ವಿ

Advertisement

ಸೆಪ್ಟೆಂಬರ್‌ ತಿಂಗಳಲ್ಲಿ ಬಿದ್ದಿರುವ ಗರಿಷ್ಠ ಮಳೆಯಿಂದಾಗಿ ಇದು ಸಾಧ್ಯವಾಗಿದೆ. ಗುಜರಾತ್‌ನಲ್ಲಿ ಕಳೆದ 30 ವರ್ಷಗಳಲ್ಲಿ ಸರಾಸರಿ 840 ಮಿ.ಮೀ. ಮಳೆಯಾಗಿದೆ. ಈ ಬಾರಿ ಸೆಪ್ಟಂಬರ್‌ ಅಂತ್ಯದವರೆಗೆ 798.7 ಮಿ.ಮೀ.ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next