ಇಸ್ಲಾಮಾಬಾದ್ : ಎಂಸಿಜಿಯಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ ಫೈನಲ್ನಲ್ಲಿ ಇಂಗ್ಲೆಂಡ್ ಎದುರು ಬಾಬರ್ ಅಜಮ್ ನಾಯಕತ್ವದ ಪಾಕಿಸ್ಥಾನ ತಂಡದ ಐದು ವಿಕೆಟ್ಗಳ ಅಂತರದ ಸೋಲಿಗೆ ವೇಗಿ ಶಾಹೀನ್ ಅಫ್ರಿದಿ ಅವರಿಗಾದ ಗಾಯವೇ ಕಾರಣ ಎಂದು ಪಾಕ್ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಪ್ರತಿಕ್ರಿಯೆಯ ಮಹಾಪೂರವೇ ಹರಿದು ಬಂದಿದೆ.
16ನೇ ಓವರ್ ಆಟದ ಮಹತ್ವದ ತಿರುವು. ಕೇವಲ ಒಂದು ಎಸೆತವನ್ನು ಬೌಲಿಂಗ್ ಮಾಡಿದ ನಂತರ, ಶಾಹೀನ್ ಅವರು ಗಾಯದ ಕಾರಣ ರನ್ ಮೈದಾನವನ್ನು ತೊರೆದರು. ಇಫ್ತಿಕರ್ ಅಹ್ಮದ್ ಓವರ್ ಪೂರ್ಣಗೊಳಿಸಿದರು ಮತ್ತು ಆ ಓವರ್ನಲ್ಲಿ ಅವರು 13 ರನ್ ನೀಡಿದರು. ಇದಾದ ನಂತರ ಡೆತ್ ಓವರ್ಗಳಲ್ಲಿ ಇಂಗ್ಲೆಂಡ್ ವೇಗ ಪಡೆದು ಆಟ ಮುಗಿಸಿತು. ಅಫ್ರಿದಿಯ ಗಾಯವು ಪಂದ್ಯದ ಮಹತ್ವದ ತಿರುವು ಎಂದು ಪಾಕಿಸ್ಥಾನದ ಅನೇಕ ಅಭಿಮಾನಿಗಳು ಮತ್ತು ಪ್ರೇಕ್ಷಕರು ಭಾವಿಸಿ ನೋವು ಹೊರ ಹಾಕಿದ್ದಾರೆ. 2.1 ಓವರ್ ಎಸೆದ ಅಫ್ರಿದಿ 13 ರನ್ ಗಳನ್ನು ನೀಡಿ 1 ವಿಕೆಟ್ ಪಡೆದಿದ್ದರು.
ಡೀಪ್ನಲ್ಲಿ ಕ್ಯಾಚ್ ಹಿಡಿಯುವಾಗ ಅಫ್ರಿದಿ ಎರಡು ಓವರ್ಗಳ ಮೊದಲು ಮೊಣಕಾಲು ನೋಯಿಸಿ ಕೊಂಡಿದ್ದರು. ಹ್ಯಾರಿ ಬ್ರೂಕ್ ಅವರು ನೀಡಿದ ಅದ್ಭುತ ಕ್ಯಾಚ್ ತೆಗೆದುಕೊಳ್ಳಲು ಅವರು ಕಠಿಣವಾಗಿ ಓಡಿ ಮುಂದೆ ಡೈವ್ ಮಾಡಿ ಅದ್ಭುತ ಕ್ಯಾಚ್ ಪಡೆದರು. ಆದರೆ ಅವರು ತಮ್ಮ ಮೊಣಕಾಲಿಗೆ ನೋವು ಮಾಡಿಕೊಂಡರು. ಈ ಹಿಂದೆಯೂ ಇದೇ ಮಂಡಿಯೇ ಅವರಿಗೆ ಸಮಸ್ಯೆ ಸೃಷ್ಟಿಸಿತ್ತು. ಅವರು ಜುಲೈನಲ್ಲಿ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿಯಲ್ಲಿ ಗಾಯಗೊಂಡಿದ್ದರು ಮತ್ತು ವಿಶ್ವಕಪ್ ಗೆ ಪುನರಾಗಮನ ಮಾಡುವ ಮೊದಲು 3 ತಿಂಗಳ ಕಾಲ ತಂಡದಿಂದ ಹೊರಗಿದ್ದರು.