Advertisement

ರಾಷ್ಟ್ರ ಪ್ರಜ್ಞೆ ಮೂಡಿಸಲಿದೆ ಎಸ್‌ಪಿಸಿ

04:43 PM Feb 17, 2020 | Naveen |

ಶಹಾಪುರ: ಶಾಲಾ ದಿನಗಳಲ್ಲಿ ಮಕ್ಕಳಿಗೆ ಶಿಸ್ತು, ಸಂಯಮ ಹಾಗೂ ರಾಷ್ಟ್ರ ಪ್ರಜ್ಞೆ ಅರಿವು ಮಾಡಿಕೊಡುವ ಕರ್ನಾಟಕ ಪೊಲೀಸ್‌ ಇಲಾಖೆ ಯೋಜನೆಯೇ ಎಸ್‌ಪಿಸಿ ತುಂಬಾ ಉಪಯುಕ್ತವಾದದು ಎಂದು ತಹಶೀಲ್ದಾರ್‌ ಜಗನ್ನಾಥರಡ್ಡಿ ಹೇಳಿದರು.

Advertisement

ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಇನ್ನು ಸಣ್ಣ ಸಸಿಯಾಗಿರುವಾಗಲೇ ಗಿಡವನ್ನು ನಮಗೆ ಬೇಕಾದ ರೀತಿಯಲ್ಲಿ ಬೆಳೆಸಬಹುದು. ದೊಡ್ಡದಾದ ಮೇಲೆ ಅದನ್ನು ಹೇಗೆ ಬೇಕೋ ಹಾಗೆ ಬೆಳೆಸಲು ಸಾಧ್ಯವಿಲ್ಲ. ಸಣ್ಣವರಿದ್ದಾಗಲೇ ಮಕ್ಕಳು ಶಿಸ್ತು, ಸಂಯವ ಕಲಿಯಬೇಕು ಎಂದು ಕಿವಿಮಾತು ಹೇಳಿದರು.

ಬಿಇಒ ರುದ್ರಗೌಡ ಪಾಟೀಲ ಮಾತನಾಡಿ, ಮಕ್ಕಳು ಪಾದರಸದಂತೆ ಚಟುವಟಿಕೆ ಉಳ್ಳವರು. ಮುಂದಿನ ಸಮಾಜದ ಹೊಣೆ ಹೊರುವ ನಾಗರಿಕರು. ಮೋಸ ವಂಚನೆ ಕಳ್ಳತನ ಮಾಡದಂತೆ ಎಸ್‌ಪಿಸಿ ಅವರನ್ನು ತರಬೇತುಗೊಳಿಸುತ್ತದೆ. ಕೆಟ್ಟಚಟಗಳನ್ನು ಕಲಿಯದಂತೆ ಕೆಟ್ಟದ್ದನ್ನು ಮಾಡದಂತೆ ತಿಳಿವಳಿಕೆ ಮೂಡಿಸುತ್ತದೆ. ಇದರಲ್ಲಿ ಭಾಗವಹಿಸುವ ಮಕ್ಕಳಲ್ಲಿ ಶಿಸ್ತು, ಸಂತಸ ಕಾಣಬಹುದು. ಇದಿರಂದ ಮುಂದಿನ ಅವರ ಬದುಕು ಉತ್ತಮವಾಗಿ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಸಿಪಿಐ ಹನುಮರಡ್ಡೆಪ್ಪ ಮಾತನಾಡಿ, ಪೊಲೀಸ್‌ ಇಲಾಖೆಗೆ ಸೇರಲು ಉತ್ತೇಜಿಸುವ ಎಸ್‌ಪಿಸಿಯನ್ನು ಮಕ್ಕಳು ತುಂಬಾ ಅಚ್ಚು ಕಟ್ಟಾಗಿ ವರ್ಷದುದ್ದಕ್ಕೂ ಮಾಡಿಕೊಂಡು ಬಂದಿದ್ದಾರೆ. ಶಿಸ್ತು ಸಂಯಮ ಹಾಗೂ ಕ್ರಮಬದ್ಧತೆ ರೂಢಿಸಿಕೊಂಡ ಹುಡುಗರು ಮುಂದೆ ಸಮಾಜಕ್ಕೆ ಮಾದರಿಯಾಗಲಿದ್ದಾರೆ ಎಂದು ಹೇಳಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಚಿಂತಕ, ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ಹಣ, ಬಂಗಾರ, ಭೂಮಿ ಆಸ್ತಿ ಅಲ್ಲವೇ ಅಲ್ಲ. ನಮ್ಮಲ್ಲಿರುವ ಜ್ಞಾನವೇ ಬಹುದೊಡ್ಡ ಆಸ್ತಿ. ಸ್ವತಂತ್ರವಾಗಿ ಆಲೋಚಿಸಿ, ಮುಕ್ತವಾಗಿ ವರ್ತಿಸಿ, ಸಮಾಜದ ಕಟ್ಟುಪಾಡುಗಳು, ಮಹಾತ್ಮರನ್ನು ಸೃಷ್ಟಿಸುವುದಿಲ್ಲ. ಅವು ಕೇವಲ ನಾಗರಿಕರನ್ನು ತಯಾರಿಸುತ್ತವೆ. ನಿಮಗೆ ನೀವೇ ಮಾರ್ಗದರ್ಶಕರಾಗಬೇಕು. ಯಾವ ಕೆಟ್ಟ ಹವ್ಯಾಸಗಳ ರೂಢಿಸಿಕೊಳ್ಳಬಾರದು. ಉತ್ತಮರ ಸಂಗ ಮಾಡಿ ನಿಮ್ಮ ಬದುಕು ಬಂಗಾರವಾಗುತ್ತದೆ ಎಂದು ಹೇಳಿದರು.

Advertisement

ಇದೇ ಸಂದರ್ಭದಲ್ಲಿ ಮಾಜಿ ಸೈನಿಕರಾದ ಎಸ್‌.ಎಂ. ಜಾನಿ ಮತ್ತು ಮರೆಪ್ಪ ಚಂಡು ಅವರನ್ನು ಸನ್ಮಾನಿಸಲಾಯಿತು. ಸುಧಾಕರ ಗುಡಿ ಹಳಿಸಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ತಿಪ್ಪಣ್ಣ ಧೋತ್ರೆ ಅಧ್ಯಕ್ಷತೆ ವಹಿಸಿದ್ದರು. ಸ.ಶಿ. ಸಿದ್ದಪ್ಪ ಪ್ರಾರ್ಥಿಸಿದರು. ಶರಶ್ಚಂದ್ರ ಅಂಬಲಗಿ ನಿರೂಪಿಸಿದರು. ಎಸ್‌ಪಿಸಿಯ ಮೋಹಿನಖಾನ್‌, ಶಿಕ್ಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next