Advertisement

ಮೂವರಿಗೆ ಕೋವಿಡ್ ಸೋಂಕು ದೃಢ

11:24 AM May 18, 2020 | Naveen |

ಶಹಾಪುರ: ಮಹಾರಾಷ್ಟ್ರದಿಂದ ಆಗಮಿಸಿ ವಿವಿಧ ಕ್ವಾರಂಟೈನ್‌ ಕೇಂದ್ರದಲ್ಲಿ ಮೂವರು ವಲಸೆ ಕಾರ್ಮಿಕರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ತಹಶೀಲ್ದಾರ್‌ ಜಗನ್ನಾಥರಡ್ಡಿ ತಿಳಿಸಿದ್ದಾರೆ.

Advertisement

ನಗರದ ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯದ ಕ್ವಾರಂಟೈನ್‌ ಕೇಂದ್ರದಲ್ಲಿದ್ದ ಒಬ್ಬ, ಬೆನಕನಹಳ್ಳಿ ಸಮೀಪದ ಕನ್ಯಾಕೋಳೂರ ಮಾರ್ಗದಲ್ಲಿರುವ ಬಿಸಿಎಂ ವಸತಿ ಮತ್ತು ಅಲ್ಪಸಂಖ್ಯಾತ ಮೆಟ್ರಿಕ್‌ ವಸತಿ ನಿಲಯದ ಕ್ವಾರಂಟೈನ್‌ ಕೇಂದ್ರದಲ್ಲಿದ್ದ ತಲಾ ಒಬ್ಬ ಕಾರ್ಮಿಕರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ ಮಹಾರಾಷ್ಟ್ರದ ಥಾಣೆಯಿಂದ ಬಂದ ಇಬ್ಬರು ಕಾರ್ಮಿಕರು, ಇನ್ನೋರ್ವ ಮುಂಬೈಯಿಂದ ಬಂದ ಕಾರ್ಮಿಕನಾಗಿದ್ದು, ಪೇಷೆಂಟ್‌ ಸಂಖ್ಯೆ 1139, 1140, 1141 ಎಂದು ಗುರುತಿಸಲಾಗಿದೆ.

ಪ್ರಾಥಮಿಕ ಸಂಪರ್ಕ ಮತ್ತು ದ್ವಿತೀಯ ಸಂಪರ್ಕದಲ್ಲಿ ಎಷ್ಟು ಜನರಿದ್ದಾರೆ ಎಂಬುದು ಅಧಿಕಾರಿಗಳಿಗೆ ತಲೆ ನೋವಾಗಿದೆ. ಮೂರು ಕ್ವಾರಂಟೈನ್‌ ಕೇಂದ್ರಗಳಲ್ಲಿ ಅಂದಾಜು 800ಕ್ಕೂ ಹೆಚ್ಚು ಜನರಿದ್ದಾರೆ. ಹೀಗಾಗಿ ಕ್ವಾರಂಟೈನ್‌ ನಲ್ಲಿರುವ ಎಲ್ಲರ ರಕ್ತ ಪರೀಕ್ಷೆ ಮತ್ತು ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುವ ಸಾಧ್ಯತೆ ಇದೆ. ಸೋಂಕಿತರಲ್ಲಿ ಓರ್ವ ತಾಲೂಕಿನ ಚಂದಾಪುರ, ಕನ್ಯಾಕೋಳೂರ ತಾಂಡಾ ಮತ್ತು ವಡಿಗೇರಾ ತಾಲೂಕಿನ ಬೆಂಡೆಬೆಂಬಳಿ ಗ್ರಾಮದ ತಲಾ ಒಬ್ಬ ಕಾರ್ಮಿಕ ಎನ್ನಲಾಗಿದೆ. ಹೀಗಾಗಿ ಚಂದಾಪುರ, ಕನ್ಯಾಕೋಳೂರ ಗ್ರಾಮದಲ್ಲಿ ಆತಂಕದ ಛಾಯೆ ಎದುರಾಗಿದೆ.

ಓರ್ವ ಮಹಾರಾಷ್ಟ್ರದಿಂದ ಬಂದು ಕನ್ಯಾಕೋಳೂರ ಗ್ರಾಮದಲ್ಲಿ ಓಡಾಡಿದ್ದಾನೆ. ಅಲ್ಲದೆ ಇನ್ನೋರ್ವ ಬೆಂಡಿಬೆಂಬಳಿ ಕಾರ್ಮಿಕ ಮಹಾರಾಷ್ಟ್ರದಿಂದ ಸೀದಾ ಪತಿ ತವರೂರಾದ ಇದೇ ಕನ್ಯಾಕೋಳೂರಗೆ ಬಂದು ಒಂದೆರಡು ದಿನ ಓಡಾಡಿದ್ದಾನೆ. ನಂತರ ಗ್ರಾಮಸ್ಥರು ವಿರೋಧಿಸಿದ ಬಳಿಕ ಇಬ್ಬರು ಕ್ವಾರಂಟೈನ್‌ಗೆ ಸೇರ್ಪಡೆಯಾಗಿದ್ದಾರೆ. ತೀವ್ರ ತಪಾಸಣೆ ಒಳಪಡಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಶೀಘ್ರದಲ್ಲಿ ಬಂದ ವರದಿಯಲ್ಲಿ ಪಾಸಿಟಿವ್‌ ಬಂದಿರುವುದು ಗೊತ್ತಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next