Advertisement

ಕೈಮಗ್ಗ ನೇಕಾರರಿಗೆ ಪ್ರೋತ್ಸಾಹಿಸಿ

01:33 PM Aug 09, 2019 | Naveen |

ಶಹಾಪುರ: ಸ್ವದೇಶಿ ಚಳುವಳಿ ಅಂಗವಾಗಿ ಅಂದು ಮಹಾತ್ಮ ಗಾಂಧೀಜಿಯವರು ಪ್ರಾರಂಭಿಸಿ ಪ್ರೋತ್ಸಾಹಿಸಿದ ಕೈಮಗ್ಗ ನೇಯ್ಗೆ ವೃತ್ತಿಯನ್ನು ಉಳಿಸಿ ಬೆಳೆಸುವಲ್ಲಿ ಸರ್ವರ ಸಹಕಾರ ಅಗತ್ಯವಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಅಜೀತ ಜಿ. ನಾಯ್ಕ ತಿಳಿಸಿದರು.

Advertisement

ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯಿತಿ ಯಾದಗಿರಿ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಉಪಕೇಂದ್ರ ಶಹಾಪುರ ಮತ್ತು ಶ್ರೀ ಬನಶಂಕರಿ ಕೈಮಗ್ಗ ನೇಕಾರರ ಸಹಕಾರ ಸಂಘದ ಆಶ್ರಯದಲ್ಲಿ ಜರುಗಿದ 5ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಕೈಮಗ್ಗ ನೇಕಾರರಿಗೆ ತಾವು ಉತ್ಪಾದಿಸಿದ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗದ ಕಾರಣ ಕೈಮಗ್ಗ ವೃತ್ತಿ ಮುಂದುವರಿಸುವಲ್ಲಿ ತೊಂದರೆಯಾಗುತ್ತಿದೆ. ಪ್ರತಿಯೊಬ್ಬರು ಕೈಮಗ್ಗದಿಂದ ಉತ್ಪಾದನೆಯಾದ ಮತ್ತು ಅತೀ ಹೆಚ್ಚು ಬಾಳಿಕೆ ಬರುವ ಬಟ್ಟೆಗಳನ್ನು ಖರೀದಿಸುವ ಸಂಕಲ್ಪ ತೊಡಬೇಕು. ದೇಶಿ ಬಟ್ಟೆ ತಯಾರಿಕೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.

ಇದರಿಂದ ಕೈಮಗ್ಗ ನೇಕಾರರು ವೃತ್ತಿ ಉಳಿಯಲಿದೆ. ಜೊತೆಗೆ ನೇಕಾರರು ಬದುಕುತ್ತಾರೆ. ನೇಕಾರರನ್ನು ಉಳಿಸಿ ಬೆಳೆಸಿದ ಕೀರ್ತಿ ಭಾರತೀಯರಿಗೆ ದೊರೆಯಲಿದೆ. ಭಾರತದ ಬೃಹತ್‌ ಉದ್ಯಮ ಒಂದಕ್ಕೆ ಜೀವ ನೀಡದಂತಾಗುತ್ತದೆ. ಭಾರತದಲ್ಲಿ ತಯಾರಾಗುವ ಕೈಮಗ್ಗದಿಂದ ತಯಾರಿಸುವ ಬಟ್ಟೆಗೆ ಅಪಾರ ಮಹತ್ವವಿದೆ. ಅದರ ಬಗ್ಗೆ ಸರ್ವರಲ್ಲಿ ಜಾಗೃತಿ ಮೂಡಿಸಬೇಕಿದೆ. ನೇಕಾರಿಕೆ ವೃತ್ತಿ ನಶಿಸಬಾರದು. ಅದರಿಂದ ಭಾರತದ ಕೀರ್ತಿ ಹೆಚ್ಚಲಿದೆ ಎಂಬುದನ್ನು ಮೊದಲು ಪ್ರತಿಯೊಬ್ಬರು ಅರಿಯಬೇಕು ಎಂದರು.

ಕೈಮಗ್ಗ ನೇಕಾರರಿಗೆ ಜವಳಿ ಉದ್ಯಮ ಪ್ರಾರಂಭಿಸಲು ಉತ್ತಮವಾದ ಅವಕಾಶಗಳಿದ್ದು, ನಿರುದ್ಯೋಗಿ ಯುವಕ ಯುವತಿಯರು ಇದರ ಸದುಪಯೋಗ ಪಡೆಯಬೇಕು. ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಯೋಜನೆ ಲಾಭ ಪಡೆಯಬೇಕು ಎಂದು ಸಲಹೆ ನೀಡಿದರು.

Advertisement

ಕಾರ್ಯಕ್ರಮವನ್ನು ನಗರಸಭೆ ಸದಸ್ಯ ಸಿದ್ದು ಆರಬೋಳ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸರಸ್ವತಿ ಹೊನಗೇರಾ, ಕೈಮಗ್ಗ ಮಾಹಿತಿ ಸರ್ಕಾರದ ಯೋಜನೆಯ ಕೈಪಿಡಿಯನ್ನು ಬಿಡುಗಡೆಗೊಳಿಸಿದರು.

ಶ್ರೀ ಬನಶಂಕರಿ ಕೈಮಗ್ಗ ನೇಕಾರರ ಸಹಕಾರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ರಾವುತ್‌, ಕೆ.ಹೆಚ್.ಡಿ.ಸಿ ಉಪ ಕೇಂದ್ರದ ಭೀಮಸೇನ ಕುಲಕರ್ಣಿ ವೇದಿಕೆ ಮೇಲಿದ್ದರು. ಇದೇ ಸಂದರ್ಭದಲ್ಲಿ ಕೈಮಗ್ಗ ನೇಕಾರಿಕೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ನಾಗರಿಕರಾದ ಚಂದ್ರಕಲಾ ವಿನಾಯಕ, ಜಮೀಲಾ ಬೇಗಂ, ಅಬ್ದುಲ್ ಸತ್ತಾರ, ಶಶಿಕಲಾ ಬಸವರಾಜ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ರಾಮರಾವ ಕುಲಕರ್ಣಿ, ಸಂಗಪ್ಪ ಎಸ್‌, ಭೀಮಬಾಯಿ, ತಿಪ್ಪಮ್ಮ, ಸೂಫೀಯಾ ಬೇಗಂ, ಗವಾರ ಬಿ, ಪುಷ್ಪಲತಾ, ಪಾರ್ವತಿ ಎಮ್‌, ಸುನಂದಾ, ಸಿದ್ದಮ್ಮ, ವೀರಬಸ್ಸಮ್ಮ, ಇಂದ್ರಮ್ಮ, ಕಾಶೀಬಾಯಿ, ಪರಿಮಳ, ಶಬಾನಾ, ತಾಹಿರಾ ಬೇಗಂ ಇದ್ದರು. ಅಮರೇಶ ಪೂಜಾರಿ ನಿರೂಪಿಸಿದರು. ಕೈಮಗ್ಗ ತನಿಖಾಧಿಕಾರಿ ಶಶಿಕಾಂತ ಆರ್‌. ವಂದನೆ ಸಲ್ಲಿಸಿದರು. ಕಾರ್ಯಕ್ರಮಕ್ಕೂ ಮುಂಚೆ ನಗರದ ಪ್ರಮುಖ ಬೀದಿಗಳಲ್ಲಿ ಕೈಮಗ್ಗ ಉಳಿಸಿ ಬೆಳೆಸಿ ಘೋಷಣೆಯೊಂದಿಗೆ ಜಾಥಾ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next