Advertisement

ಶಹಾಬಾದ: ಕಚೇರಿ ಆರಂಭಕ್ಕೆ ಒತ್ತಾಯ

06:12 AM Mar 09, 2019 | Team Udayavani |

ಶಹಾಬಾದ: ತಾಲೂಕು ಘೋಷಣೆಯಾಗಿ ಸುಮಾರು ಒಂದು ವರ್ಷವಾಗುತ್ತ ಬಂದಿದ್ದು, ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕಚೇರಿಗಳನ್ನು ಪ್ರಾರಂಭಿಸಬೇಕು ಎಂದು ಭಾರತೀಯ ದಲಿತ ಪ್ಯಾಂಥರ್‌ ತಾಲೂಕಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿಮನಿ ಒತ್ತಾಯಿಸಿದರು.

Advertisement

ತಹಶೀಲ್ದಾರ್‌ ಕಚೇರಿ ಮುಂಭಾಗದಲ್ಲಿ ಭಾರತೀಯ ದಲಿತ ಪ್ಯಾಂಥರ್‌ನ ತಾಲೂಕಾ ಘಟಕದ ವತಿಯಿಂದ ತಾಲೂಕು ಕಚೇರಿಗಳನ್ನು ಪ್ರಾರಂಭಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ನಡೆದ ಪ್ರತಿಭಟನೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲೂಕು ಘೋಷಣೆಯಾಗಿ ಇಲ್ಲಿಯವರೆಗೆ ಹೆಸರಿಗೆ ಮಾತ್ರ ತಹಶೀಲ್ದಾರ್‌ರ ನೇಮಕವಾಗಿದೆ. ತಹಶೀಲ್ದಾರ್‌ ಕಚೇರಿಯಲ್ಲಿ ಕುಳಿತುಕೊಳ್ಳಲು ಆಸನಗಳು ಇಲ್ಲದೇ ಅಧಿಕಾರಿಗಳು ಪರದಾಡುತ್ತಿದ್ದಾರೆ. ಸಾರ್ವಜನಿಕರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತಿದೆ ಎಂದರು.
 
ಹಲವಾರು ವರ್ಷಗಳಿಂದ ಶಹಾಬಾದ ನಗರದ ನೆಹರು ವೃತ್ತದಿಂದ ಗೋಳಾ (ಕೆ) ಗ್ರಾಮದ ವರೆಗೆ ರಸ್ತೆ ನಿರ್ಮಾಣ ಮಾಡಿಲ್ಲ. ಇದರಿಂದ ಹದಗೆಟ್ಟ ರಸ್ತೆಗಳಲ್ಲಿಯೇ ಸಾರ್ವಜನಿಕರು ಸಂಚರಿಸುವಂತಾಗಿದೆ. ಮಳೆ ಬಂದಾಗ ಕೆಸರು ಗದ್ದೆಯಾಗುತ್ತದೆ. ಉಳಿದ ದಿನಗಳಲ್ಲಿ ಧೂಳು ಸೂಸುವ ರಸ್ತೆಯಾಗಿ ಮಾರ್ಪಾಡಾಗುತ್ತದೆ.

ಇದರಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮಕೈಗೊಳ್ಳುತ್ತಿಲ್ಲ. ಕೂಡಲೇ ನಗರದ ನೆಹರು ವೃತ್ತದಿಂದ ಗೋಳಾ (ಕೆ) ಗ್ರಾಮದವರೆಗೆ ಡಾಂಬರೀಕರಣ ರಸ್ತೆ ನಿರ್ಮಾಣವಾಗಬೇಕು. ಈಗಿರುವ ತಹಶೀಲ್ದಾರ್‌ ಕಚೇರಿ
ಚಿಕ್ಕದಾಗಿರುವುದರಿಂದ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಬೇಕು.

ನೆಮ್ಮದಿ ಕೇಂದ್ರದಗಳಲ್ಲಿ ಪ್ರಮಾಣ ಪತ್ರಗಳನ್ನು ನೀಡಲು ಎರಡು ಕೌಂಟರ್‌ಗಳನ್ನು ತೆಗೆಯಬೇಕು. ಗ್ರೇಡ್‌-2 ತಹಶೀಲ್ದಾರ್‌ ನೇಮಕ ಮಾಡಬೇಕು. ಆಧಾರ ಕಾರ್ಸ್‌ ಕೇಂದ್ರ ಪ್ರಾರಂಭ ಮಾಡಬೇಕು. ಪಹಣಿ ವಿತರಣಾ ಕೌಂಟರ್‌ ಪ್ರತ್ಯೇಕವಾಗಿ ತೆರೆಯಬೇಕೆಂದು ಆಗ್ರಹಿಸಿದರು.ನಂತರ ತಹಶೀಲ್ದಾರ್‌ ಸುರೇಶ ವರ್ಮಾ ಮುಖಾಂತರ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.

Advertisement

ಭಾರತೀಯ ದಲಿತ ಪ್ಯಾಂಥರ್‌ ಜಿಲ್ಲಾಧ್ಯಕ್ಷ ಮಲ್ಲಪ್ಪ ಹೊಸಮನಿ, ನಗರ ಉಪಾಧ್ಯಕ್ಷರಾದ ಶಂಕರ್‌ ಅಳ್ಳೋಳ್ಳಿ, ಸುರೇಶ ಮೆಂಗನ್‌, ಶಿವಶಾಲಕುಮಾರ ಪಟ್ಟಣಕರ್‌, ಮಲ್ಲಿಕಾರ್ಜುನ ಮಾಡಬೂಳ, ಸೂರ್ಯಕಾಂತ ಬುರ್ಲೆ, ಅಂಬ್ರೇಶ ದೊಡ್ಡಮನಿ, ಅರುಣ ಮಾಲಗತ್ತಿ, ಶಿವಕುಮಾರ
ಹುಗ್ಗಿ, ಸಂತೋಷ ಹೊನಗುಂಟಿ, ಕಿರಣ ಶಂಕರವಾಡಿ, ಮೋಹನ ಹಳ್ಳಿ, ಕಲ್ಯಾಣಿ ದಂಡೋತಿ, ವಿಶಾಲ ಜಾಯಿ, ಪ್ರದೀಪ ಕೋಬಾಳಕರ್‌ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next