Advertisement

ತಡರಾತ್ರಿಯವರೆಗೆ ಶಾರುಖ್‌ ಖಾನ್‌ ಬರ್ತ್‌ ಡೇ ಪಾರ್ಟಿ;ಪೊಲೀಸರ ತಡೆ!

10:24 AM Nov 03, 2018 | Team Udayavani |

ಮುಂಬಯಿ: ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಅವರು ಶುಕ್ರವಾರ ತಮ್ಮ 53 ನೇ ಜನ್ಮದಿನದ ಸಂಭ್ರಮಾಚರಣೆಯಲ್ಲಿದ್ದರು.ಅದ್ದೂರಿ ಬರ್ತ್‌ಡೇ ಪಾರ್ಟಿಗೆ ಪೊಲೀಸರು ಎಂಟ್ರಿ ನೀಡಿ ತಡೆ ಹಾಕಿದ ಘಟನೆ ನಡೆದಿದೆ. 

Advertisement

ಬಾಲಿವುಡ್‌ ಸ್ನೇಹಿತರು ಮತ್ತು ಗಣ್ಯರೊಂದಿಗೆ ಬಾಂದ್ರಾದ ಅರ್ಥ್ ನೈಟ್‌ಕ್ಲಬ್‌ನಲ್ಲಿ  ತಡರಾತ್ರಿ 3 ಗಂಟೆಯ ವರಗೆ ಮೋಜು ಮಸ್ತಿ ಪಾರ್ಟಿ ನಡೆಯುತ್ತಿತ್ತು. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಪಾರ್ಟಿಗೆ ಬ್ರೇಕ್‌ ಹಾಕಿದ್ದಾರೆ. 

ಪೊಲೀಸರ ಆಗಮನದ ಬಳಿಕ ಮಿತ್ರರೊಂದಿಗೆ ಶಾರುಖ್‌ ಖಾನ್‌ ಅವರು ಹೊರ ಬರುತ್ತಿರುವ ದೃಶ್ಯಗಳು ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿವೆ. ಹಲವು ಗಣ್ಯರು ಪೊಲೀಸರು ಆಗಮಿಸುವ ಮುನ್ನವೇ ಸ್ಥಳದಿಂದ ತೆರಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next