Advertisement

ರಕ್ಷಣೆಯ ಹೊಣೆ: ಅಮಿತಾಬ್, ಶಾರುಖ್, ದೀಪಿಕಾ “ಬಾಡಿಗಾರ್ಡ್”ಗಳ ವಾರ್ಷಿಕ ಆದಾಯ ಎಷ್ಟಿರಬಹುದು?

02:29 PM Nov 25, 2022 | Team Udayavani |

ಮುಂಬೈ: ಬಾಲಿವುಡ್, ಮಾಲಿವುಡ್, ಕಾಲಿವುಡ್ ಹೀಗೆ ಸಿನಿಮಾರಂಗದಲ್ಲಿ ನಟ/ನಟಿಯರು ಸ್ಟಾರ್ ಪಟ್ಟ ಅಲಂಕರಿಸುವುದು ಸಾಮಾನ್ಯ. ಒಬ್ಬ ಅಭಿಮಾನಿಯಾಗಿ ನೀವು ನಿಮ್ಮ ನೆಚ್ಚಿನ ನಟ/ನಟಿಯ ಸುತ್ತ-ಮುತ್ತ ಎತ್ತರದ, ಆಜಾನುಬಾಹು ಖಾಸಗಿ ಅಂಗರಕ್ಷಕರು ಇದ್ದಿರುವುದನ್ನು ಗಮನಿಸಿರುತ್ತೀರಿ. ಹೌದು ಸ್ಟಾರ್ ನಟ, ನಟಿಯರನ್ನು ಸುಲಭದಲ್ಲಿ ಭೇಟಿಯಾಗೋದು, ಮಾತನಾಡಿಸುವುದು ಕಷ್ಟ. ಅದಕ್ಕೆ ಕಾರಣ ಈ ಬಾಡಿ ಗಾರ್ಡ್ಸ್ ಗಳು!

Advertisement

ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಕೊಲೆ ಮಾಡಿ ತಪ್ಪಿಸಿಕೊಂಡಿದ್ದಾತ 4 ವರ್ಷದ ಬಳಿಕ ದೆಹಲಿಯಲ್ಲಿ ಬಂಧನ

ಜನಪ್ರಿಯ, ಸ್ಟಾರ್ ನಟ, ನಟಿಯರನ್ನು ಈ ಅಂಗರಕ್ಷಕರು ನೆರಳಿನಂತೆ 24X7ರಂತೆ ಸುತ್ತುವರಿದಿರುತ್ತಾರೆ. ಜನರ ಗುಂಪಿನಿಂದ, ಅವರ ಸುರಕ್ಷತೆಯ ದೃಷ್ಟಿಯಲ್ಲಿ ಖಾಸಗಿ ಅಂಗರಕ್ಷಕರು ಜೊತೆಯಲ್ಲಿಯೇ ಇರುತ್ತಾರೆ. ಆ ನಿಟ್ಟಿನಲ್ಲಿ ಕೆಲವು ಜನಪ್ರಿಯ ನಟ, ನಟಿಯರ ಅಂಗರಕ್ಷಕರ ವಾರ್ಷಿಕ ಸಂಬಳದ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದ್ದು…ನೀವು ಹುಬ್ಬೇರಿಸುವುದು ಖಚಿತ!

(ಟಿಪ್ಪಣಿ: ಸ್ಟಾರ್ ನಟ, ನಟಿಯರ ಖಾಸಗಿ ಅಂಗರಕ್ಷಕರ ಸಂಬಳದ ಮಾಹಿತಿ ಹಲವಾರು ಮಾಧ್ಯಮಗಳ ವರದಿಯಾಗಿದೆಯೇ ವಿನಃ, ಅಧಿಕೃತ ಮಾಹಿತಿಯಲ್ಲ ಎಂದು ತಿಳಿಸಿದೆ)

ಅಮಿತಾಬ್ ಬಾಡಿಗಾರ್ಡ್-ಜಿತೇಂದ್ರ ಶಿಂಧೆ:

Advertisement

ಜಿತೇಂದ್ರ ಶಿಂಧೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅಂಗರಕ್ಷಕರಾಗಿದ್ದಾರೆ. ಅವರು ಕಾರ್ಬೈನ್ ಗನ್ ಹಿಡಿದುಕೊಂಡು ಬಿಗ್ ಬಿಯನ್ನು ರಕ್ಷಣೆಯ ಕಾರ್ಯದಲ್ಲಿ ತೊಡಗಿರುವುದನ್ನು ಹಲವು ಕಾರ್ಯಕ್ರಮಗಳಲ್ಲಿ ಗಮನಿಸಿರಬಹುದು. ಶಿಂಧೆ ಮಹಾರಾಷ್ಟ್ರದಲ್ಲಿ ಸೆಕ್ಯುರಿಟಿ ಏಜೆನ್ಸಿಯನ್ನು ನಡೆಸುತ್ತಿದ್ದಾರೆ. ಆದರೆ ಶಿಂಧೆ ಬಚ್ಚನ್ ಅವರ ವೈಯಕ್ತಿಕವಾಗಿ ಅಂಗರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರ ವಾರ್ಷಿಕ ಆದಾಯ ಅಂದಾಜು 1.5 ಕೋಟಿ ರೂಪಾಯಿ.

ರವಿ ಸಿಂಗ್:

ರವಿ ಸಿಂಗ್ ಬಾಲಿವುಡ್ ಬಾದಷಾ ಶಾರುಖ್ ಖಾನ್ ಅವರ ಅಂಗರಕ್ಷಕರಾಗಿದ್ದಾರೆ. ಶಾರುಖ್ ಖಾನ್ ಎಲ್ಲೇ ಹೋಗಲಿ ಅವರ ಜೊತೆಗೆ ಎತ್ತರದ, ದೃಢಕಾಯದ ರವಿ ಸಿಂಗ್ ಜೊತೆಯಲ್ಲಿಯೇ ಇರುತ್ತಾರೆ. ಪಿಂಕ್ ವಿಲ್ಲಾ ವರದಿ ಪ್ರಕಾರ, ಖಾನ್ ಬಾಡಿಗಾರ್ಡ್ ಸಿಂಗ್ ಅವರ ವಾರ್ಷಿಕ ಆದಾಯ 2.7 ಕೋಟಿ ರೂಪಾಯಿ. ರವಿ ಬಾಲಿವುಡ್ ನಲ್ಲಿಯೇ ಅತ್ಯಧಿಕ ಸಂಬಳ ಪಡೆಯುವ ಅಂಗರಕ್ಷಕರಾಗಿದ್ದಾರೆ.

ಶೇರಾ:

ಶೇರಾ ಬಾಲಿವುಡ್ ನ ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ಸಭೆ, ಸಮಾರಂಭವಿರಲಿ ಸಲ್ಮಾನ್ ಜೊತೆಯಲ್ಲೇ ಶೇರಾ ಕೂಡಾ ಇರಲಿದ್ದಾರೆ. ವರದಿಯ ಪ್ರಕಾರ, ಶೇರಾ ವಾರ್ಷಿಕ ಸಂಬಳ 2 ಕೋಟಿ ರೂಪಾಯಿ.

ಜಲಾಲ್:

ಜಲಾಲ್ ನಟಿ ದೀಪಿಕಾ ಪಡುಕೋಣೆಯ ಖಾಸಗಿ ಬಾಡಿಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ದೀಪಿಕಾ ಅಂಗರಕ್ಷಕರಾಗಿರುವ ಜಲಾಲ್ ವಾರ್ಷಿಕ ಸಂಬಳ 1.2 ಕೋಟಿ ಎಂದು ವರದಿ ತಿಳಿಸಿದೆ.

ಪ್ರಕಾಶ್ ಸಿಂಗ್:

ಪ್ರಕಾಶ್ ಸಿಂಗ್ ಅಲಿಯಾಸ್ ಸೋನು ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ದಂಪತಿಗೆ ಬಾಡಿಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವರದಿಯ ಪ್ರಕಾರ ಸಿಂಗ್ ವಾರ್ಷಿಕ ಸಂಬಳ 1.2 ಕೋಟಿ ರೂಪಾಯಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next