ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿರುವ “ಜವಾನ್’ ಸಿನಿಮಾ ಕನ್ನಡ ಸೇರಿ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುವುದಾಗಿ ಘೋಷಿಸಿ ಸುದ್ದಿಯಾಗಿತ್ತು.
Advertisement
ಇದೀಗ ಆ ಸಿನಿಮಾದ ಸ್ಟ್ರೀಮಿಂಗ್ ಹಕ್ಕನ್ನು ನೆಟ್‌ಫ್ಲಿಕ್ಸ್ ಒಟಿಟಿ ಖರೀದಿಸಿದೆ ಎಂದು “ಬಾಲಿವುಡ್ ಲೈಫ್’ ಮಾಧ್ಯಮ ವರದಿ ಮಾಡಿದೆ.
ಬರೋಬ್ಬರಿ 120 ಕೋಟಿ ರೂ. ನೀಡಿ ಸಿನಿಮಾದ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಖರೀದಿ ಮಾಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ತಮಿಳಿನ ಸ್ಟಾರ್ ನಿರ್ದೇಶಕ ಅಟ್ಲೀ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಶಾರುಖ್‌ಗೆ ಜೋಡಿಯಾಗಿ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ.