ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ “ಪಠಾಣ್’ ಸಿನಿಮಾ ಮಂಗಳವಾರ ಇತಿಹಾಸ ಸೃಷ್ಟಿಸಿದೆ.
ವಿಶ್ವಾದ್ಯಂತ ಬಾಕ್ಸ್ ಆಫಿಸ್ ಗಳಿಕೆಯಲ್ಲಿ 1,000 ಕೋಟಿ ರೂ. ಗಳಿಸಿದ ಮೊದಲ ಹಿಂದಿ ಸಿನಿಮಾ ಎಂಬ ಅಭಿದಾನಕ್ಕೆ ಪಾತ್ರವಾಗಿದೆ.
ಖ್ಯಾತ ಸಿನಿಮಾ ವಿತರಕ ಸಂಸ್ಥೆ ಯಶ್ ರಾಜ್ ಫಿಲಂಸ್ ಪ್ರಕಾರ, ಸಿದ್ಧಾರ್ಥ ಆನಂದ್ ನಿರ್ದೇಶನದ ಪಠಾಣ್ ಸಿನಿಮಾ ವಿಶ್ಯಾದಂತ ಗಳಿಕೆಯಲ್ಲಿ 1,000 ಕೋಟಿ ರೂ. ದಾಟಿದೆ. ಈ ಪೈಕಿ ಭಾರತದಲ್ಲಿ 623 ಕೋಟಿ ರೂ. ಹಾಗೂ ವಿದೇಶದಲ್ಲಿ 377 ಕೋಟಿ ರೂ. ಗಳಿಸಿದೆ.
ಸೋಮವಾರ ಒಂದೇ ದಿನ ಭಾರತದಲ್ಲಿ 1.25 ಕೋಟಿ ರೂ. ಗಳಿಸಿದೆ. ಈ ಮೂಲಕ ಹಿಂದಿ ಸಿನಿ ಕ್ಷೇತ್ರದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಬಾಕ್ಸ್ ಆಫಿಸ್ ಕಲೆಕ್ಷನ್ ಮಾಡಿದ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ ಎಂದು ತಿಳಿಸಿದೆ.