ಶ್ರೀನಗರ: ಶಾರುಖ್ ಖಾನ್ ʼಪಠಾಣ್ʼ ಸಿನಿಮಾ ವಿಶ್ವದಾದ್ಯಂತ ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಬಾಲಿವುಡ್ ಇಸ್ ಬ್ಯಾಕ್ ಎನ್ನುವುದನ್ನು ʼಪಠಾಣ್ʼ ತೋರಿಸಿಕೊಟ್ಟಿದೆ.
ಎರಡನೇ ದಿನ ʼಪಠಾಣ್ʼ ಸಿನಿಮಾ 70 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಶಾರುಖ್ ಖಾನ್ ರನ್ನು ಬಿಗ್ ಸ್ಕ್ರೀನ್ ಮೇಲೆ ಬಹು ಸಮಯದ ಬಳಿಕ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ರಿಲೀಸ್ ಗೂ ಮುನ್ನ ಒಂದಷ್ಟು ವಿಚಾರಗಳಿಂದ ವಿವಾದಕ್ಕೆ ಕಾರಣವಾಗಿದ್ದ ಸಿನಿಮಾ ರಿಲೀಸ್ ಆದ ಬಳಿ ಕಂಟೆಂಟ್ ನಿಂದ ಸೌಂಡ್ ಮಾಡುತ್ತಿದೆ.
ಬಾಕ್ಸ್ ಆಫೀಸ್ ನಲ್ಲಿ ಕೋಟಿಗಳಿಸಿರುವ ʼಪಠಾಣ್ʼ ಕಾಶ್ಮೀರದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈ ಬಗ್ಗೆ ಐನಾಕ್ಸ್ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, 32 ವರ್ಷದ ಬಳಿಕ ಕಾಶ್ಮೀರದ ಥಿಯೇಟರ್ ವೊಂದು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈ ರೀತಿ ಥಿಯೇಟರ್ ಗೆ ಹರಿದು ಬರುತ್ತಿರುವ ಜನರನ್ನು ಕರೆತಂದ ʼಪಠಾಣ್ʼ ಸಿನಿಮಾ ಹಾಗೂ ಶಾರುಖ್ ಅವರನ್ನು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಟ್ವೀಟ್ ಮಾಡಿದೆ.
32 ವರ್ಷದ ಬಳಿಕ ಕಾಶ್ಮೀರದಲ್ಲಿ ಸಿನಿಮಾಕ್ಕಾಗಿ ಥಿಯೇಟರ್ ಹೌಸ್ ಫುಲ್ ಆಗಿದೆ. ಸದ್ಯ ʼಪಠಾಣ್ʼ ಸಿನಿಮಾಕ್ಕಾಗಿ ಕಾಶ್ಮೀರದಲ್ಲಿ ಮಾತ್ರವಲ್ಲದೇ ಇತರ ಕಡೆಗಳಲ್ಲೂ ಟಿಕೆಟ್ ಖರೀದಿಸಿ ಪ್ರೇಕ್ಷಕರು ಕಾದು ನಿಂತಿದ್ದಾರೆ.
Related Articles
ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಮುಖ್ಯ ಭೂಮಿಕೆಯಲ್ಲಿ ʼಪಠಾಣ್ʼ ಸ್ಪೈ ಥ್ರಿಲ್ಲರ್ ಕಥೆಯನ್ನು ಒಳಗೊಂಡಿದೆ.