Advertisement

ಮಗ ಅಬ್ರಾಂ ಹಾಕಿ ಆಟಗಾರನಾಗಬೇಕು ಎಂದ ಶಾರುಖ್‌

07:00 AM Apr 10, 2018 | Team Udayavani |

ನವದೆಹಲಿ: ನನ್ನ ಮಗ ಅಬ್ರಾಂ ಹಾಕಿ ಆಟಗಾರನಾಗಬೇಕು. ಭಾರತ ತಂಡದಲ್ಲಿ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎಂದು ಬಾಲಿವುಡ್‌ ನಟ, ಐಪಿಎಲ್‌ನ ಕೆಕೆಆರ್‌ ಫ್ರಾಂಚೈಸಿ ಮಾಲಿಕ ಶಾರುಕ್‌ ಖಾನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಕೋಲ್ಕತಾ ಮತ್ತು ಬೆಂಗಳೂರು ಐಪಿಎಲ್‌ ಪಂದ್ಯವನ್ನು ವೀಕ್ಷಿಸಿದ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಶಾರುಖ್‌, 5 ವರ್ಷದವನಾದ ಅಹ್ರಾಂ ಇನ್ನು ಕ್ರಿಕೆಟ್‌ ಆಡುತ್ತಿಲ್ಲ. ಫ‌ುಟ್ಬಾಲ್‌ ಹಿಡಿದುಕೊಂಡು ಆಟ ಆಡುತ್ತಾನೆ. ಆದರೆ, ನಾನು ಆತ ಹಾಕಿ ಆಟಗಾರನಾಗುವುದನ್ನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಶಾರುಖ್‌ “ಚೇಕ್‌ ದೇ ಇಂಡಿಯಾ’ ಚಿತ್ರದಲ್ಲಿ ಹಾಕಿ ಕೋಚ್‌ ಆಗಿ ಅಭಿನಯಿಸಿದ್ದರು. ಆ ಚಿತ್ರ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ. ಹೀಗಾಗಿ ಶಾರುಖ್‌ಗೆ ಹಾಕಿ ಮೇಲಿನ ಅಭಿಮಾನ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next