ಬಾಲಿವುಡ್ ನಟ ಶಾರುಖ್ ಖಾನ್ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಬರೋಬ್ಬರಿ 30 ವರ್ಷಗಳು ಸಂದಿವೆ. ಅದೇ ಖುಷಿಯಲ್ಲಿ ನಟ ಶನಿವಾರ ತಮ್ಮ ಮುಂಬರುವ ಚಿತ್ರವಾಗಿರುವ “ಪಠಾಣ್’ನ ಫಸ್ಟ್‌ಲುಕ್ ಹಂಚಿಕೊಂಡಿದ್ದಾರೆ.
ಉದ್ದ ಕೂದಲು, ಗಡ್ಡ ಬಿಟ್ಟಿರುವ ಶಾರುಖ್, ಕೈನಲ್ಲಿ ಶಾಟ್‌ಗನ್ ಹಿಡಿದಿರುವ ಲುಕ್ ಅದಾಗಿದೆ. “30 ವರ್ಷ ಕಳೆದಿದೆ, ನಿಮ್ಮ ಪ್ರೀತಿ ಅಗಣಿತವಾದ್ದರಿಂದ ವರ್ಷಗಳನ್ನು ಲೆಕ್ಕ ಹಾಕುತ್ತಿಲ್ಲ’ ಎಂದು ಬರೆದುಕೊಂಡಿದ್ದಾರೆ ಶಾರುಖ್.
ಇದನ್ನೂ ಓದಿ:ಬೆನ್ನಟ್ಟಿದ ಬೀದಿನಾಯಿಗಳ ಹಿಂಡು : ತಪ್ಪಿಸಿಕೊಳ್ಳುವ ಭರದಲ್ಲಿ ಬಿದ್ದು ಪತ್ರಕರ್ತನಿಗೆ ಗಾಯ
ಅಂದ ಹಾಗೆ ಪಠಾಣ್ ಸಿನಿಮಾ 2023ರ ಜ.23ರಂದು ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.