Advertisement

ಗಾಲೆ ಟೆಸ್ಟ್‌ ಪಂದ್ಯ: ಅಬ್ದುಲ್ಲ ಶಫೀಕ್‌ ಶತಕ; ಗೆಲುವಿನತ್ತ ಪಾಕಿಸ್ಥಾನ

12:02 AM Jul 20, 2022 | Team Udayavani |

ಗಾಲೆ: ಆತಿಥೇಯ ಶ್ರೀಲಂಕಾ ಎದುರಿನ ಗಾಲೆ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ಥಾನ ಗೆಲುವಿನತ್ತ ಮುನ್ನಡೆಯುತ್ತಿದೆ. 342 ರನ್ನುಗಳ ಗುರಿ ಪಡೆದ ಪಾಕ್‌, 4ನೇ ದಿನದಾಟದ ಅಂತ್ಯಕ್ಕೆ 3 ವಿಕೆಟಿಗೆ 222 ರನ್‌ ಪೇರಿಸಿದೆ. ಆರಂಭಕಾರ ಅಬ್ದುಲ್ಲ ಶಫೀಕ್‌ 112 ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Advertisement

ಶ್ರೀಲಂಕಾ ದ್ವಿತೀಯ ಸರದಿಯಲ್ಲಿ 337 ರನ್‌ ಪೇರಿಸಿತು. ದಿನೇಶ್‌ ಚಂಡಿಮಾಲ್‌ ಜತೆಗಾರ ರಿಲ್ಲದ ಕಾರಣ ಶತಕದಿಂದ ವಂಚಿತರಾಗಬೇಕಾಯಿತು. ಅವರು 94 ರನ್‌ ಮಾಡಿ ಅಜೇಯರಾಗಿ ಉಳಿದರು. ಅಬ್ದುಲ್ಲ ಶಫೀಕ್‌ 289 ಎಸೆತಗಳನ್ನು ನಿಭಾಯಿಸಿದ್ದು, 5 ಫೋರ್‌ ಹಾಗೂ ಒಂದು ಸಿಕ್ಸರ್‌ ಬಾರಿಸಿ ಸಿಂಹಳೀಯರಿಗೆ ಸಿಂಹಸ್ವಪ್ನರಾಗಿದ್ದಾರೆ.

ಇಮಾಮ್‌ ಉಲ್‌ ಹಕ್‌ 35, ನಾಯಕ ಬಾಬರ್‌ ಆಜಂ 55 ರನ್‌ ಹೊಡೆದರು. ಅಜರ್‌ ಅಲಿ (6) ವಿಕೆಟ್‌ ಅಗ್ಗಕ್ಕೆ ಉರುಳಿತು. ಮೂರರಲ್ಲಿ 2 ವಿಕೆಟ್‌ ಪ್ರಭಾತ್‌ ಜಯಸೂರ್ಯ ಪಾಲಾಗಿದೆ. ಅಂತಿಮ ದಿನದಾಟದ ಬೆಳಗಿನ ಅವಧಿಯಲ್ಲಿ ಶ್ರೀಲಂಕಾ ಬೌಲರ್‌ಗಳೇನಾದರೂ ಮ್ಯಾಜಿಕ್‌ ಮಾಡಿದರಷ್ಟೇ ಪಂದ್ಯದ ಗತಿ ಬದಲಾದೀತು.

Advertisement

Udayavani is now on Telegram. Click here to join our channel and stay updated with the latest news.

Next