Advertisement

ನೆರಳು ಗಿಡಗಳ ಪೋಷಣೆ: ಆಟೋ ರಿಕ್ಷಾ ಚಾಲಕರಿಗೆ ಅಭಿನಂದನೆ

10:11 PM Mar 23, 2019 | |

ಕುಂಬಳೆ: ನೆರಳಿಗಾಗಿ ಗಿಡಗಳನ್ನು ನೆಟ್ಟು ನಿರಂತರ ಅವುಗಳಿಗೆ ನೀರೆರೆದು ಪೋಷಿಸುವ ಮಾದರಿ ಆಟೋ ಚಾಲಕರ ತಂಡವನ್ನು ವಿದ್ಯಾರ್ಥಿ ಸಮೂಹ ಅಭಿನಂದಿಸಿತು.

Advertisement

ವಿಶ್ವ ಅರಣ್ಯ ದಿನಾಚರಣೆಯ ಅಂಗವಾಗಿ ನಡೆದ ಸಮಾರಂಭದಲ್ಲಿ ಕುಂಬಳೆ ಪೇಟೆಯ ಆಟೋ ಚಾಲಕರ ಪರಿಸರ ಪ್ರೇಮವನ್ನು ಕೊಂಡಾಡಿದ ಮಕ್ಕಳು ಅವರಿಗೆ ಉಡುಗೊರೆಗಳನ್ನು ನೀಡಿ ಗೌರವಿಸಿದರು. ಕಳೆದೆರಡು ವರ್ಷಗಳಿಂದ ತಮ್ಮ ಆಟೋ ಸ್ಟಾÂಂಡ್‌ನ್ನು ಹಸರೀಕರಣಗೊಳಿಸುವ ನಿಟ್ಟಿನಲ್ಲಿ ಎರಡು ಬಾದಾಮಿ ಗಿಡಗಳನ್ನು ನೆಟ್ಟು ಸಂರಕ್ಷಿಸುವುದು ಮಕ್ಕಳ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಆಟೋ ಚಾಲಕರಿಗೆ ಮಾತ್ರವಲ್ಲ ನಾಗರಿಕರಿಗೂ ನೆರಳಿನಾಸರೆಯಾಗುವಂತೆ ಕುಂಬಳೆ ಪೇಟೆಯ ಹೃದಯ ಭಾಗದಲ್ಲಿ ಬಾದಾಮಿ ಮರಗಳು ಬೆಳೆಯುತ್ತಿವೆ. ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳು  à ಚಾಲಕರ ಈ ಪ್ರಕೃತಿ ಪ್ರೇಮವನ್ನು ಗುರುತಿಸಿಅದಕ್ಕಾಗಿ ನೇತೃತ್ವ ನೀಡಿದ ಚಾಲಕ‌ ರಾಜಣ್ಣ ಅವರನ್ನು ವಿಶೇಷವಾಗಿ ಗೌರವಿಸಿದರು.

ಹತ್ತು ಮಕ್ಕಳ ಸಾಕಿ ಸಲಹಿದಂತೆ
ಕುಂಬಳೆಯ ಆಟೋ ಚಾಲಕರು ಮರವೊಂದನ್ನು ನೆಟ್ಟು ಬೆಳೆಸುವುದು ಹತ್ತು ಮಕ್ಕಳನ್ನು ಸಾಕಿ ಸಲಹುವುದಕ್ಕೆ ಸಮಾನ ಎಂಬುದನ್ನು ಸಾಧಿಸಿ ತೋರಿಸಿದ್ದಾರೆಂದು ಹೋಲಿ ಫ್ಯಾಮಿಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿ.ಹಿಲ್ಡಾ ಕ್ರಾಸ್ತ ಈ ಸಂದರ್ಭದಲ್ಲಿ ಹೇಳಿದರು. ಮರ ಗಿಡಗಳ ರಕ್ಷಣೆಯಿಂದ ನಮ್ಮನ್ನು ನಾವೇ ರಕ್ಷಿಸಿದಂತಾಗುವುದು ಎಂದು ಗೈಡ್‌ ನಾಯಕಿ ಕಾರ್ಮೆಲಿ ತಿಳಿಸಿದರು. ಪುಟಾಣಿ ಪಕ್ಷಿ ನಿರೀಕ್ಷಕ ಪ್ರಣವ್‌ ಸ್ವಾಗತಿಸಿದರು. ಅಧ್ಯಾಪಕ ರಾಜು ಕಿದೂರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next