Advertisement

ಅಂತಿಮ ಹಂತದತ್ತ ‘ಶಭಾಷ್‌ ಬಡ್ಡಿಮಗ್ನೆ’

09:42 AM Dec 04, 2022 | Team Udayavani |

“ಕಿಶನ್‌ ಪ್ರೊಡಕ್ಷನ್‌’ ಲಾಂಛನದಲ್ಲಿ ಪ್ರಕಾಶ್‌ ನಿರ್ಮಿಸುತ್ತಿರುವ “ಶಭಾಷ್‌ ಬಡ್ಡಿಮಗ್ನೆ’ ಸಿನಮಾದ ಚಿತ್ರೀಕರಣ ಅಂತಿಮ ಹಂತಕ್ಕೆ ತಲುಪಿದೆ.

Advertisement

ಈಗಾಗಲೇ ಮೂಡಿಗೆರೆ, ಕೊಟ್ಟಿಗೆಹಾರ, ಬಾಳೂರು, ಕೊಡಿಗೆ ಜಲಪಾತ ಹಾಗೂ ಸುತ್ತಮತ್ತಲಿನಲ್ಲಿ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ಸಿನಿಮಾದ 80ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ.

ಪ್ರಮೋದ್‌ ಶೆಟ್ಟಿ, ಪ್ರಿಯಾ, ಸಾಮ್ರಾಟ್‌ ಶೆಟ್ಟಿ, ಕಾವ್ಯಾಶ್ರೀ, ಶಂಕರ್‌ ಅಶ್ವಥ್‌, ರವಿತೇಜ, ಮಿತ್ರ, ಪ್ರಕಾಶ್‌ ತುಮ್ಮಿನಾಡು, ರಮೇಶ್‌ ರೈ ಕುಕ್ಕವಳ್ಳಿ, ಈಶ್ವರ್‌ ಶೆಟ್ಟಿ, ಮೂಗು ಸುರೇಶ್‌, ಶೋಭಾ ಶೆಟ್ಟಿ, ಸುಧಾ, ಸವಿತ, ಗೀತಾವಸಂತ್‌, ಮಮತಾ ರಾಜಶೇಖರ್‌ ಮೊದಲಾದವರು “ಶಭಾಷ್‌ ಬಡ್ಡಿಮಗ್ನೆ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ:ಆಸೀಸ್ ವಿರುದ್ಧ ಗೆದ್ದಅರ್ಜೆಂಟೀನಾ: ಕ್ವಾರ್ಟರ್ ಫೈನಲ್ ಗೆ ಮೆಸ್ಸಿ ಪಡೆ

ಬಿ.ಎಸ್‌ ರಾಜಶೇಖರ್‌ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶಿಸುತ್ತಿದ್ದಾರೆ. ಎಸ್‌. ಪಿ. ಭೂಪತಿ ಸಂಗೀತ ಸಂಯೋಜನೆಯ ನಾಲ್ಕು ಹಾಡುಗಳಿಗೆ ಕವಿರಾಜ್‌ ಸಾಹಿತ್ಯವಿದೆ. ಚಿತ್ರಕ್ಕೆ ಅಣಜಿ ನಾಗರಾಜ್‌ ಛಾಯಾಗ್ರಹಣವಿದೆ.

Advertisement

ಶೀಘ್ರದಲ್ಲಿಯೇ ಅಂತಿಮ ಹಂತದ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಚನೆ ಹಾಕಿಕೊಂಡಿದ್ದು, ಹೊಸ ವರ್ಷದ ಆರಂಭದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next