ಶಬರಿಮಲೆ: ಪುಣ್ಯ ಕ್ಷೇತ್ರ ಶಬರಿಮಲೆಗೆ ಕೋಟ್ಯಾಂತರ ಭಕ್ತಾದಿಗಳು ಆಗಮಿಸಿ ಶ್ರೀ ಅಯ್ಯಪ್ಪನ ದರ್ಶನ ಮಾಡಿ, ದೇವರಿಗೆ ತಾವು ತಂದ ತುಪ್ಪ, ಪಂಚಾಮೃತ, ಭಸ್ಮ ಅಭಿಷೇಕ ಮಾಡಿಕೊಂಡು ಪುನೀತರಾಗಿ ತೆರಳುತ್ತಾರೆ.
ಆದರೆ ಪ್ರತಿಯೊಬ್ಬನಿಗೂ ಮಾಲೆ ಹಾಕಲು ಒಬ್ಬ ಗುರುಸ್ವಾಮಿ ಬೇಕೆ ಬೇಕು. ಗುರುಸ್ವಾಮಿಯ ಕೈಯಿಂದ ಮಾಲಾಧಾರಣೆ ಮಾಡಿ ಗುರುಸ್ವಾಮಿ ಬೋಧಿಸಿದ ನೀತಿ ನಿಯಮಗಳನ್ನು ಪಾಲಿಸಿಕೊಂಡು ವೃತಾಚರಣೆ ಮಾಡಬೇಕು.
ಗುರುಸ್ವಾಮಿಯಾಗಲು ಒಬ್ಬ ಶಿಷ್ಯ ತನ್ನ ಗುರುವಿನ ಜತೆ ಸತತ 5 ವರ್ಷ ಹಾಗೂ ಹೆಚ್ಚು ಬಾರಿ ಮಕರ ಉತ್ಸವ ಸಂದರ್ಭದಲ್ಲಿ ಮಲೆಯ ಹಾದಿ ತುಳಿದು ಅಯ್ಯಪ್ಪ ದರ್ಶನ ಮಾಡಬೇಕು. ಅಂದರೆ ಸತತ ಐದು ಅಥವಾ ಹೆಚ್ಚು ಬಾರಿ ಮಕರ ಜ್ಯೋತಿಯ ದರ್ಶನ ಪಡೆದಿರಬೇಕು. ಸನ್ನಿಧಾನದಲ್ಲಿ ಶಬರಿಮಲೆಯ ತಂತ್ರಿಗಳ ಉಪಸ್ಥಿತಿಯಲ್ಲಿ ಗುರುಗಳಿಂದ ದೀಕ್ಷೆ ಪಡೆದು ಗುರುಸ್ವಾಮಿಯಾಗಬಹುದು.
ದೀಕ್ಷೆ ಪಡೆದ ನಂತರ ಪ್ರತೀ ವರ್ಷ ಅಯ್ಯಪ್ಪ ಸನ್ನಿಧಾನಕ್ಕೆ ಹೋಗಬೇಕು. ಪ್ರತಿ ವರ್ಷ ಒಬ್ಬಾನಾದರೂ ಕನ್ನಿ ಸ್ವಾಮಿ (ಮೊದಲ ಬಾರಿಯ ಮಾಲಾಧಾರಿ) ಯನ್ನು ಕರೆದುಕೊಂಡು ಹೋಗಬೇಕು.
ತನ್ನ ಶಿಷ್ಯರ ಯಾತ್ರೆಯ ಎಲ್ಲಾ ಜವಾಬ್ದಾರಿ ಗುರುಸ್ವಾಮಿಯ ಮೇಲಿರುತ್ತದೆ. ಜತೆಗೆ ಎಲ್ಲಾ ನೀತಿ ನಿಯಮಗಳನ್ನು ಶಿಷ್ಯಂದಿರು ಪಾಲಿಸುವ ಜವಾಬ್ದಾರಿಯು ಗುರುಸ್ವಾಮಿಯ ಮೇಲಿರುತ್ತದೆ.
ತಾನು ಕಳೆದ 49 ವರ್ಷಗಳಿಂದ ಶಬರಿಮಲೆ ಯಾತ್ರೆ ಮಾಡುತ್ತಿದ್ದು, ನಾನು ಮಾಲಾಧಾರಣೆ ಮಾಡುವ ಶಿಷ್ಯಂದಿರು 41 ದಿನ ಕಡ್ಡಾಯ ವೃತಾಚಾರಣೆ ಮಾಡಿಯೇ ಮಲೆಗೆ ಹೊರಡುತ್ತೇವೆ. ವೃಶ್ಚಿಕ ಮಾಸದ 1ನೇ ದಿನ ಬಂದ ಭಕ್ತಾದಿಗಳಿಗೆ ಮಾಲಾಧಾರಣೆ ಮಾಡುತ್ತೇನೆ. ಪ್ರತೀ ವರ್ಷ 40ಕ್ಕೂ ಅಧಿಕ ಶಿಷ್ಯಂದಿರು ಇರುತ್ತಾರೆ. ಮುಂದಿನ ಬಾರಿ(2021) 50 ವರ್ಷದ ಯಾತ್ರೆಯ ಅಂಗವಾಗಿ ಪಾದಾಯಾತ್ರೆ ಮೂಲಕ ಕ್ಷೇತ್ರಕ್ಕೆ ಶಿಷ್ಯರ ಜತೆ ಯಾತ್ರೆ ಮಾಡಲಿದ್ದೇನೆ.
-ಬಾಬು ಬೆಳ್ಚಪ್ಪಾಡ ಎರ್ಕ, ಅರಿಯಡ್ಕ (ಬಾಬು ಗುರುಸ್ವಾಮಿ)
ಪ್ರವೀಣ್ ಚೆನ್ನಾವರ