ಕಾಸರಗೋಡು: ಶಬರಿಮಲೆ ತೀರ್ಥಾಟನೆಗೆ ತೆರಳುತ್ತಿದ್ದ ಕಾಸರಗೋಡು ಕೂಡ್ಲು ನಿವಾಸಿ ನವೀನ್(47) ಅವರು ಅಳುದಾ ಸಮೀಪ ಮುಕ್ಕುಳಿಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.
ಕಾಸರಗೋಡು ಶ್ರೀ ಧರ್ಮಶಾಸ್ತಾ ಸೇವಾ ಸಂಘದ ಅಯ್ಯಪ್ಪ ಭಕ್ತರ ನೇತೃತ್ವದಲ್ಲಿರುವ 84 ಮಂದಿ ತಂಡದೊಂದಿಗೆ ನವೀನ್ ತೀರ್ಥಾಟನೆಗೆ ತೆರಳಿದ್ದರು. ಎರುಮೇಲಿಯ ವರೆಗೆ ಬಸ್‌ನಲ್ಲಿ ತೆರಳಿದ ಇವರು ಅಲ್ಲಿಂದ ಸನ್ನಿಧಾನಕ್ಕೆ ಕಾಲ್ನಡೆಯಾಗಿ ತೆರಳುತ್ತಿದ್ದಾಗ ಅಳುದಾ ಸಮೀಪದ ಮುಕ್ಕುಳಿಗೆ ತಲುಪಿದಾಗ ಹೃದಯಾಘಾತ ಸಂಭವಿಸಿದೆ.
ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಮೃತ ದೇಹವನ್ನು ಊರಿಗೆ ತರಲಾಗುವುದು.
ನವೀನ್ ಕಾಸರಗೋಡಿನಲ್ಲಿ ಎ.ಸಿ. ಹಾಗು ವಾಷಿಂಗ್ ವೆಶಿನ್ ಮೆಕಾನಿಕ್ ಆಗಿ ದುಡಿಯುತ್ತಿದ್ದರು. ಮೃತರು ತಾಯಿ ಕುಸುಮಲತಾ, ಪತ್ನಿ ವಿಶಾಲಾಕ್ಷಿ, ಮಕ್ಕಳಾದ ಶ್ರೀಲಕ್ಷ್ಮೀ, ವಿಘ್ನೇಶ್, ವೈಷ್ಣವಿ (ಮೂವರು ವಿದ್ಯಾರ್ಥಿಗಳು), ಸಹೋದರ ಸಹೋದರಿಯರಾದ ಶಕೀಲ, ಶೈಲ, ಶಾಲಿನಿ, ಸಂದೇಶ್ ಕುಮಾರ್ ಹಾಗು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.