Advertisement

ಎಸ್‌ಎಫ್ಐ ವಿದ್ಯಾರ್ಥಿ ಮುಖಂಡನ ಹತ್ಯೆ

06:00 AM Jul 03, 2018 | Team Udayavani |

ಕೊಚ್ಚಿ: ಕೇರಳದ ಕಾಲೇಜ್‌ ಕ್ಯಾಂಪಸ್‌ವೊಂದರಲ್ಲಿ ಎಸ್‌ಎಫ್ಐ ವಿದ್ಯಾರ್ಥಿ ಮುಖಂಡನನ್ನು ಇರಿದು ಹತ್ಯೆಗೈದ ಘಟನೆ ನಡೆದಿದೆ. ಎರ್ನಾಕುಲಂ ಬಳಿಯ ಮಹಾರಾಜ್‌ ಕಾಲೇಜ್‌ ಕ್ಯಾಂಪಸ್‌ನಲ್ಲಿ ರವಿವಾರ ತಡರಾತ್ರಿ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿ ಅಭಿಮನ್ಯು (20) ಮೇಲೆ ದಾಳಿ ನಡೆಸಿ ಕೊಲೆ ಮಾಡಲಾಗಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ.

Advertisement

ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ(ಪಿಎಫ್ಐ) ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆಯಿದ್ದು, ಪಿಎಫ್ಐ ಮತ್ತು ಕ್ಯಾಂಪಸ್‌ ಫ್ರಂಟ್‌ ಸಂಘಟನೆಯ ಮೂವರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಲೇಜಿನ ಗೋಡೆಯನ್ನು ಬಳಸುವ ಸಂಬಂಧ ಘರ್ಷಣೆ ನಡೆದು ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಘಟನೆಯನ್ನು ಖಂಡಿಸಿ ಎಸ್‌ಎಫ್ಐ ಹಾಗೂ ಸಿಪಿಎಂ ವಿದ್ಯಾರ್ಥಿ ಘಟಕಗಳು ಸೋಮವಾರ ರಾಜ್ಯವ್ಯಾಪ್ತಿ ಬಂದ್‌ಗೆ ಕರೆ ನೀಡಿದ್ದವು. ಘಟನೆಯನ್ನು ಖಂಡಿಸಿರುವ ಸಿಎಂ ಪಿಣರಾಯಿ ವಿಜಯನ್‌, ಇದೊಂದು ವ್ಯವಸ್ಥಿತ ಹತ್ಯೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next