Advertisement

ಟಿ-ಸೀರಿಸ್‌ ಮುಖ್ಯಸ್ಥನ ವಿರುದ್ಧದ ಲೈಂಗಿಕ ಶೋಷಣೆ ದೂರು ವಾಪಸ್‌

10:07 AM Jan 17, 2019 | udayavani editorial |

ಹೊಸದಿಲ್ಲಿ : ಟಿ-ಸೀರಿಸ್‌ ಮುಖ್ಯಸ್ಥ ಹಾಗೂ ಚಿತ್ರ ನಿರ್ಮಾಪಕ ಭೂಷಣ್‌ ಕುಮಾರ್‌ ವಿರುದ್ಧ ನಿನ್ನೆ ಬುಧವಾರ ಮುಂಬಯಿಯ ಓಶಿವಾರಾ ಪೊಲೀಸ್‌ ಠಾಣೆಯಲ್ಲಿ ಲೈಂಗಿಕ ಶೋಷಣೆಯ ದೂರು ದಾಖಲಿಸಿದ್ದ  ಟಿ-ಸೀರಿಸ್‌ ಮಹಿಳಾ ಉದ್ಯೋಗಿ ಇಂದು ಗುರುವಾರ ತನ್ನ ದೂರನ್ನು ಹಿಂಪಡೆದಿರುವುದಾಗಿ ವರದಿಯಾಗಿದೆ. 

Advertisement

‘ನಾನು ಜುಗುಪ್ಸೆ ಮತ್ತು ಮಾನಸಿಕ ಒತ್ತಡದಿಂದ ದೂರು ನೀಡಿದ್ದೆ; ನನಗೆ ಭೂಷಣ್‌ ಅವರ ಪ್ರತಿಷ್ಠೆಗೆ ಮಸಿ ಬಳಿಯುವ ಯಾವುದೇ ಇರಾದೆ ಇಲ್ಲ’ ಎಂದಾಕೆ ತನ್ನ ದೂರು ಹಿಂಪಡೆವ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾಳೆ. 

ಇದೇ ವೇಳೆ ಆಕೆ, ತನ್ನ ವಿರುದ್ಧ ಅಂಬೋಲಿ ಪೊಲೀಸ್‌ ಠಾಣೆಯಲ್ಲಿ ಹಣ-ಸುಲಿಗೆ ದೂರು ದಾಖಲಿಸಿರುವ ನಿರ್ಮಾಪಕ ಕೃಷನ್‌ ಕುಮಾರ್‌ ಕೂಡ ದೂರನ್ನು ಹಿಂಪಡೆಯಬೇಕೆಂದು ಕೇಳಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next