ಬೆಂಗಳೂರು: ರಾಜ್ಯದಲ್ಲೂ 2 ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪೆ¤ ಮೇಲೆ ನೆರೆಮನೆ ವಾಸಿ ಕಿರಣ್ (29) ಎಂಬಾತ ಲೈಂಗಿಕ ದೌರ್ಜನ್ಯ ಎಸಗಿದ್ದು, ಆತನ ವಿರುದ್ಧ ಪೋಕೊÕà ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಪರಾರಿಯಾಗಿದ್ದಾನೆ. ಕಿರಣ್‌ಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆರೋಪಿ ಕಿರಣ್, ಪತ್ನಿ ಹಾಗೂ ಸಂತ್ರಸ್ತ ಬಾಲಕಿಯ ತಾಯಿ ಪರಿಚಯಸ್ಥರು. ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ ಕಿರಣ್, ಚಾಕಲೇಟ್, ಕುರುಕುಲು ತಿಂಡಿಗಳನ್ನು ಕೊಡಿಸಿ ಆತ್ಮೀಯತೆ ಬೆಳೆಸಿಕೊಂಡಿದ್ದ. ಯಾರೂ ಇಲ್ಲದ ವೇಳೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
4 ವರ್ಷದ ಬಾಲಕನ ಮೇಲೆ ದೌರ್ಜನ್ಯ: ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ ಠಾಣಾ ವ್ಯಾಪ್ತಿಯಲ್ಲಿ 4 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತಾಯಿ ಮೃತಪಟ್ಟಿದ್ದರಿಂದ ನಾಲ್ಕು ವರ್ಷದ ಬಾಲಕ ಚಿಕ್ಕಮ್ಮನ ಆಶ್ರಯದಲ್ಲಿದ್ದ. ಸೆ.8ರಂದು ಸಂಜೆ ಮಗುವಿನ ತಂದೆ ರಮೇಶ ಬಾಲಕನನ್ನು ತನ್ನೊಂದಿಗೆ ಕರೆದೊಯ್ದಿದ್ದ. ಬಳಿಕ ಮಾರನೇ ದಿನ ಮಗುವನ್ನು ಚಿಕ್ಕಮ್ಮನ ಮನೆ ಮುಂದೆ ಬಿಟ್ಟು ಹೋಗಿದ್ದ. ಈ ವೇಳೆ ಮಗುವಿನ ಜನನಾಂಗದಲ್ಲಿ ಬಾಯಿಂದ ಕಚ್ಚಿದ ಗಾಯ ಹಾಗೂ ಗುಪ್ತಾಂಗದಲ್ಲಿ ರಕ್ತಸ್ರಾವವಾಗುತ್ತಿತ್ತು ಎನ್ನಲಾಗಿದೆ. ಬಾಲಕನ ತಂದೆ ರಮೇಶ ವಿರುದಟಛಿ ಸ್ವಯಂ ಪ್ರೇರಿತ ದೂರು
ದಾಖಲಿಸಿಕೊಳ್ಳುವಂತೆ ಎಸ್‌ಪಿ ಸಂತೋಷ ತಿಳಿಸಿದ್ದಾರೆ.