Advertisement

ಕೇಶವ ಸಹಿತ ಇಬ್ಬರಿಗೆ ನ್ಯಾಯಾಂಗ ಬಂಧನ

12:30 AM Mar 16, 2019 | Team Udayavani |

ಕೋಟ: ತೆಕ್ಕಟ್ಟೆ- ಕೆದೂರಿನ ಸ್ಫೂರ್ತಿಧಾಮ ಸಂಸ್ಥೆಯಲ್ಲಿದ್ದ ಅನಾಥ ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿ ಸ್ಥಳೀಯ ನೂಜಿಯ ನಿವಾಸಿ ಹನುಮಂತ ಹಾಗೂ ಸಂಸ್ಥೆಯ ಮುಖ್ಯಸ್ಥ ಕೇಶವ ಕೋಟೇಶ್ವರನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗೆ ಪೋಕ್ಸೋ ಕಾಯಿದೆಯಡಿ ಮಾ. 27ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

ಧಾಮದಿಂದ ತಪ್ಪಿಸಿಕೊಂಡ ಬಾಲಕಿಯೋರ್ವಳು ಮಾ. 13ರಂದು ಸಾಸ್ತಾನದಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿ ಕೋಟ ಪೊಲೀಸರಿಗೆ ಹಸ್ತಾಂತರಿಸಲ್ಪಟ್ಟಿದ್ದಳು. ಅನಾಥೆಯಾಗಿದ್ದ ಆಕೆ ಹಲವು ವರ್ಷಗಳಿಂದ ಸ್ಫೂ³ರ್ತಿಯಲ್ಲಿ ವಾಸವಿದ್ದು, ಇತ್ತೀಚೆಗೆ ಮಂಗಳೂರಿನ ಕುಟುಂಬ ವೊಂದು ದತ್ತು ಪಡೆದಿತ್ತು. ಆರೋಗ್ಯದ ಸಮಸ್ಯೆಯಿಂದ ಆಕೆ ಮತ್ತೆ ಸ್ಫೂರ್ತಿಗೆ ವಾಪಸಾಗಿದ್ದಳು. ಇಲ್ಲಿ ಸ್ಥಳೀಯ ವ್ಯಕ್ತಿ ಹನುಮಂತ ಎಂಬಾತ ಮೊದಲಿನಿಂದ ಲೈಂಗಿಕ ದೌರ್ಜನ್ಯ ನೀಡುತ್ತಿದ್ದು ಅದನ್ನು ಮುಂದುವರಿಸಿದ್ದ. ಇದರಿಂದ ಬೆದರಿದ ಆಕೆ ದತ್ತು ಪಡೆದವರ ಬಳಿಗೆ ತೆರಳಲು ನಿಶ್ಚಯಿಸಿ ಅಲ್ಲಿಂದ ತಪ್ಪಿಸಿಕೊಂಡಿದ್ದಳು ಎಂಬ ವಿಚಾರ ತಿಳಿದುಬಂತು.

ಕೋಟ ಪೊಲೀಸರು ಪ್ರಕರಣವನ್ನು ಉಡುಪಿ ಮಹಿಳಾ ಠಾಣೆಗೆ ಹಸ್ತಾಂ ತರಿಸಿದ್ದಾರೆ. ಹನುಮಂತನನ್ನು ವಶಕ್ಕೆ ಪಡೆದ ಪೊಲೀಸರು ಸ್ಫೂರ್ತಿಧಾಮಕ್ಕೆ ಭೇಟಿ ನೀಡಿ ಆರೇಳು ಬಾಲಕಿಯರನ್ನು ವಿಚಾರಿಸಿದರು. ಅವರ ಮೇಲೂ ದೌರ್ಜನ್ಯ ದೃಢವಾಯಿತು. ಒಬ್ಟಾಕೆ ಕೇಶವ ಕೋಟೇಶ್ವರ ಕೂಡ ದೌರ್ಜನ್ಯ ಎಸಗಿದ್ದಾನೆ ಎಂದ ಕಾರಣ ತಡರಾತ್ರಿ ಆತನನ್ನೂ ಬಂಧಿಸಲಾಯಿತು.

ಪುಸಲಾಯಿಸಿ ಕೃತ್ಯ
ಸಂಬಂಧಿಯೋರ್ವರು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಆರೋಪಿ ಹನುಮಂತ ಆಗಾಗ ಇಲ್ಲಿಗೆ ಬಂದು ಹೋಗುತ್ತಿದ್ದ ಹಾಗೂ ಮಕ್ಕಳಿಗೆ ಚಾಕಲೇಟ್‌, ತಿಂಡಿ ನೀಡಿ ಪರಿಚಯ ಮಾಡಿಕೊಂಡಿದ್ದ. ರಾತ್ರಿ ವೇಳೆ ಕದ್ದು-ಮುಚ್ಚಿ ಕಿಟಕಿಯ ಮೂಲಕ ಒಳಪ್ರವೇಶಿಸಿ ದೌರ್ಜನ್ಯ ಎಸಗುತ್ತಿದ್ದ. ಸಂಸ್ಥೆಯವರಿಗೆ ಈ ವಿಚಾರ ತಿಳಿದಾಗ ಆತನನ್ನು ತರಾಟೆಗೆ ತೆಗೆದುಕೊಂಡು ರಾಜಿ ಮೂಲಕ ಪ್ರಕರಣ ಇತ್ಯರ್ಥಕ್ಕೆ ಪ್ರಯತ್ನಿಸಿದ್ದರು ಎನ್ನಲಾಗಿದೆ. ತನಿಖೆ ವೇಳೆ ಇನ್ನಷ್ಟು ವಿಚಾರಗಳು ಹೊರಬರುವ ಸಾಧ್ಯತೆ ಇದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

22 ಮಕ್ಕಳ ಸ್ಥಳಾಂತರ
ತೆಕ್ಕಟ್ಟೆ: ಸ್ಫೂರ್ತಿಧಾಮದಲ್ಲಿರುವ 22 ಮಕ್ಕಳನ್ನು (16 ಬಾಲಕರು, 6 ಬಾಲಕಿಯರು) ಜಿಲ್ಲಾಡಳಿತದ ನಿರ್ದೇಶನದಂತೆ ಉಡುಪಿ ನಿಟ್ಟೂರಿನ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿ ರಕ್ಷಣೆ ನೀಡಲಾಗಿದೆ. ದತ್ತು ಮಕ್ಕಳನ್ನು ಸಂತೆಕಟ್ಟೆಯಲ್ಲಿನ ದತ್ತು ಕೇಂದ್ರಗಳಿಗೆ ಕಳುಹಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next