Advertisement

2 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌! 

03:45 AM Apr 23, 2017 | Team Udayavani |

ಪಟ್ನಾ: ಎರಡು ವರ್ಷದ ಬಾಲಕ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಎಂದು 35 ವರ್ಷದ ಮಹಿಳೆ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಎಫ್ಐಆರ್‌ ದಾಖಲಿಸಿ, ಆರೋಪಿಗೆ ಶರಣಾಗುವಂತೆ ಸೂಚಿಸಿದ್ದು, ಇದರಿಂದ ಬೆಚ್ಚಿಬಿದ್ದ ಎರಡು ವರ್ಷ ವಯಸ್ಸಿನ ಆರೋಪಿ, ಹಲವು ದಿನಗಳಿಂದ ನಿದ್ದೆಯನ್ನೇ ಮಾಡಿಲ್ಲ!

Advertisement

ಅಸಾಧ್ಯವಾದರೂ ನೀವಿದನ್ನು ನಂಬಲೇಬೇಕು. ಬಿಹಾರದ ಪೂರ್ವ ಚಂಪಾರಣ್‌ ಜಿಲ್ಲೆಯ ಬೇಲಾ ಬೈಜು ಗ್ರಾಮದ ಮಹಿಳೆ, “2 ವರ್ಷದ ಪುಟ್ಟ ದಲಿತ ಹುಡುಗನೊಬ್ಬ, ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಚಿನ್ನದ ಸರ ಕದ್ದೊಯ್ದಿದ್ದಾನೆ,’ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.  

ಆದರೆ ಅಸಲಿ ಕೇಸೇ ಬೇರೆ. ಈಗ ದೂರು ನೀಡಿರುವ ಮಹಿಳೆಯ ಪತಿ, ಈ 2 ವರ್ಷದ ಬಾಲಕನ ಅಜ್ಜನ ಮೇಲೆ ಹಲ್ಲೆ ನಡೆಸಿದ್ದು, ವೃದ್ಧನ ತಲೆಗೆ ಗಂಭೀರ ಪೆಟ್ಟುಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಈ ಕೇಸಿನಿಂದ ಪತಿಯನ್ನು ಬಚಾವ್‌ ಮಾಡಲು ಸಂಚು ಮಾಡಿದ ಮಹಿಳೆ ಎರಡು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಕೇಸು ದಾಖಲಿಸಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next