Advertisement

ಲೈಂಗಿಕ ದೌರ್ಜನ್ಯ ಆರೋಪ :ಇಬ್ಬರ ಸೆರೆ

10:08 AM Jul 12, 2018 | Team Udayavani |

ವೇಣೂರು: ಅಪ್ರಾಪ್ತ ವಯಸ್ಸಿನ ಸಹೋದರಿಯರಿಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ ಅತ್ಯಾಚಾರಗೈದ ಇಬ್ಬರು ಆರೋಪಿಗಳನ್ನು ವೇಣೂರು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

ನಾವೂರು ಜಾಲಪಲ್ಕೆ ನಿವಾಸಿ ಪ್ರಕಾಶ್‌ (24) ಹಾಗೂ ಕಾರ್ಕಳ ತಾಲೂಕಿನ ಮಾಲ ಮಠದಬೆಟ್ಟು ನಿವಾಸಿ ಶರತ್‌ (21) ಬಂಧಿತ ಆರೋಪಿಗಳು.

ನಾರಾವಿ ಸಮೀಪದ ಈದು ನಿವಾಸಿಗಳಾದ ಅಪ್ರಾಪ್ತ ಯುವತಿಯರು ಸುಲ್ಕೇರಿಯಲ್ಲಿರುವ ಅಜ್ಜಿ ಮನೆಯಲ್ಲಿ ವಾಸವಾಗಿದ್ದರು. ಇಲ್ಲಿಂದ ಯುವತಿಯರು ಗೇರುಬೀಜ ಕಾರ್ಖಾನೆಗೆ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ದೂರದ ಸಂಬಂಧಿಗಳಾದ ಪ್ರಕಾಶ್‌ ಹಾಗೂ ಶರತ್‌ ಸುಲ್ಕೇರಿಯ ಮನೆಗೆ ಬರುತ್ತಿದ್ದರು. ಬಾಲಕಿಯರಲ್ಲಿ ತೀರಾ ಸಲುಗೆ ಬೆಳೆಸಿಕೊಂಡ ಆರೋಪಿಗಳು ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ ದೈಹಿಕವಾಗಿ ಬಳಸಿಕೊಂಡಿದ್ದಾರೆ. ಈ ಸಂಬಂಧ ಸಂಶಯಗೊಂಡ ಸಹೋದಯರಿಯರ ಹೆತ್ತವರು ವೇಣೂರು ಪೊಲೀಸರಿಗೆ ದೂರು ನೀಡಿದ್ದರು. ´ೋಕೊÕ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next