ಪ್ಯಾರಿಸ್ : ಇಲ್ಲಿನ ರೈಲು ನಿಲ್ದಾಣದಲ್ಲಿ ಬುಧವಾರ ಮುಂಜಾನೆ ದುಷ್ಕರ್ಮಿಯೊಬ್ಬನಿಂದ ಹಲವು ಜನರು ಇರಿತಕ್ಕೊಳಗಾಗಿದ್ದಾರೆ ಎಂದು ಫ್ರೆಂಚ್ ಮಾಧ್ಯಮಗಳು ವರದಿ ಮಾಡಿವೆ. ಪೊಲೀಸರು ದಾಳಿಕೋರನನ್ನು ಶೀಘ್ರವಾಗಿ ಹೊಡೆದುರುಳಿಸಿದ್ದಾರೆ ಎಂದು ಆಂತರಿಕ ಸಚಿವ ಜೆರಾಲ್ಡ್ ಡಾರ್ಮಾನಿನ್ ಹೇಳಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ ಗರೆ ಡು ನಾರ್ಡ್ ನಿಲ್ದಾಣದಲ್ಲಿ ಶಸ್ತ್ರಸಜ್ಜಿತವಾದ ದಾಳಿಕೋರ ಹಲವಾರು ಜನರನ್ನು ಗಾಯಗೊಳಿಸುತ್ತಿದ್ದಾಗ ಪೊಲೀಸರು ಗುಂಡು ಹಾರಿಸಿದ್ದಾರೆ. ಘಟನೆಯು ನಡೆದ ಬಳಿಕ ಯಾವುದೇ ತತ್ ಕ್ಷಣದ ಹೆಚ್ಚಿನ ವಿವರಗಳನ್ನು ನೀಡುತ್ತಿಲ್ಲ.
ದಾಳಿಕೋರ ನಿಲ್ದಾಣದಲ್ಲಿ ಹಲವಾರು ಜನರನ್ನು ಗಾಯಗೊಳಿಸಿದ್ದು, ಗಾಯಗೊಂಡವರ ಬಗ್ಗೆ ಯಾವುದೇ ವಿವರಗಳನ್ನು ನೀಡುವುದಿಲ್ಲ ಎಂದು ಆಂತರಿಕ ಸಚಿವ ಹೇಳಿದ್ದಾರೆ.