ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಎರಡನೇ ಅಲೆ ಹಾವಳಿ ಜೋರಾಗಿದ್ದು,ಶುಕ್ರವಾರ ಮತ್ತೆ 700ಕ್ಕೂ ಹೆಚ್ಚು ಜನರಿಗೆಸೋಂಕು ಪತ್ತೆಯಾಗಿದೆ. ಇದರಲ್ಲಿ ಏಳುಮಂದಿ ಸೋಂಕಿತರು ಮಹಾಮಾರಿಗೆರೋಗಕ್ಕೆ ತುತ್ತಾಗಿದ್ದಾರೆ.
ಇಲ್ಲಿನ ತಿಲಕ್ ನಗರದ 48ವರ್ಷದ ವ್ಯಕ್ತಿ, ಎಂ.ಬಿ. ನಗರದ 50ವರ್ಷದ ವ್ಯಕ್ತಿ, ಶಹಾಬಜಾರ್‌ನ 62ವರ್ಷದ ವೃದ್ಧ, ಮಹಾದೇವ ನಗರದ 86ವರ್ಷದ ವೃದ್ಧ, ಕುವೆಂಪು ನಗರದ 59 ವರ್ಷದಮಹಿಳೆ, ಮಕ್ಕಾ ಕಾಲೋನಿಯ 68 ವರ್ಷದ ವೃದ್ಧೆಹಾಗೂ ಚಿತ್ತಾಪುರ ತಾಲೂಕಿನ ಟೆಂಗಳಿ ಗ್ರಾಮದ40 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದಮೃತಪಟ್ಟಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿಇದುವರೆಗೆ ಕೊರೊನಾ ಸೋಂಕಿನಿಂದ ಮೃತರಸಂಖ್ಯೆ 417ಕ್ಕೆ ಏರಿಕೆಯಾಗಿದೆ.ಹೊಸದಾಗಿ 742 ಮಂದಿಗೆ ಸೋಂಕುಕಾಣಿಸಿಕೊಂಡಿದೆ. ಇದರೊಂದಿಗೆ ಒಟ್ಟಾರೆಸೋಂಕಿತರ ಸಂಖ್ಯೆ 33037ಕ್ಕೆ ಹೆಚ್ಚಳವಾಗಿದೆ.
ಇದೇ ವೇಳೆ 210 ಜನ ಸೋಂಕಿತರುಗುಣಮುಖರಾಗಿದ್ದಾರೆ. ಈಮೂಲಕ ಇಲ್ಲಿಯ ವರೆಗೆ 26394ಮಂದಿ ಕೊರೊನಾ ಪೀಡಿತರುಚೇತರಿಸಿಕೊಂಡಂತೆ ಆಗಿದೆ. ಇನ್ನು,6226 ಸಕ್ರಿಯ ಸೋಂಕಿತರು ಇದ್ದಾರೆ.ಇವರಲ್ಲಿ 785 ಸೋಂಕಿತರು ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದರೆ, 5277 ಜನ ಹೋಂಐಸೋಲೇಷನ್‌ನಲ್ಲಿ ಇದ್ದಾರೆ.
32 ಮಂದಿಸೋಂಕಿತರು ಕೋವಿಡ್ ಕೇರ್‌ಸೆಂಟರ್‌ನಲ್ಲಿ ದಾಖಲಾಗಿದ್ದಾರೆ. 4,238 ಜನರ ಕೊರೊನಾಮಾದರಿ ಪರೀಕ್ಷೆ ವರದಿ ಬಾಕಿ ಇದೆ.