Advertisement

ಅಬುಧಾಬಿ: ದಿಢೀರ್‌ ಪ್ರವಾಹ: ಮಳೆಗೆ ಕೊಚ್ಚಿಹೋದ ಮನೆ, ವಾಹನಗಳು; ಏಳು ಸಾವು

12:39 AM Jul 31, 2022 | Team Udayavani |

ಅಬುಧಾಬಿ: ಈವರೆಗಿನ ನಮ್ಮ ಜೀವಿ ತಾವಧಿಯಲ್ಲಿ ಇಷ್ಟೊಂದು ಅಗಾಧ ಮಳೆ ಯನ್ನು ನೋಡಿರಲೇ ಇಲ್ಲ….. ಇದು ಶಾರ್ಜಾದ ಕಲ್ಬಾ ಎಂಬ ಪ್ರಾಂತ್ಯದ ನಿವಾಸಿಗಳ ಮಾತು.

Advertisement

ಯುಎಇ ಸ್ಥಳೀಯ ಕಾಲಮಾನ, ಶುಕ್ರವಾರ ಬೆಳಗಿನ ಜಾವ ಸುಮಾರು 6 ಗಂಟೆಗೆ ಸುರಿದ ಅಗಾಧ ಮಳೆಯಿಂದಾಗಿ, ಅನೇಕ ನಗರಗಳಲ್ಲಿ ಪ್ರವಾಹದ ಸ್ಥಿತಿ ಏರ್ಪಟ್ಟು ಮನೆಗಳಿಗೆ ನೀರು ನುಗ್ಗುವುದು, ರಸ್ತೆಗಳು ಜಖಂ ಆಗಿರುವುದು ಮುಂತಾದ ತೊಂದರೆಗಳಾಗಿವೆ.

ಅದರಲ್ಲೂ, ಹಿಂದೆಂದೂ ಕಂಡಿರದ ದಿಢೀರ್‌ ಪ್ರವಾಹಕ್ಕೆ ಅಬುಧಾಬಿ ತುತ್ತಾ ಗಿದೆ. ಭಾರೀ ಮಳೆಯಿಂದ ಉಂಟಾದ ಪ್ರವಾಹವು ಫುಜೈರಾ, ಶಾರ್ಜಾ, ರಸ್‌ ಅಲ್‌ ಖೈಮಾದಲ್ಲಿ ಜನಜೀವ ನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ಕೆಲವೇ ಗಂಟೆಗಳ ಮಳೆಯು 7 ಮಂದಿ ಯನ್ನು ಬಲಿ ಪಡೆದಿದ್ದು, ಅಪಾರ ಪ್ರಮಾ ಣದ ಹಾನಿಯನ್ನು ಉಂಟುಮಾಡಿದೆ.

ಸುಮಾರು 870 ಮಂದಿಯನ್ನು ಪ್ರವಾಹಪೀಡಿತ ಪ್ರದೇಶಗಳಿಂದ ರಕ್ಷಿಸ ಲಾಗಿದ್ದು, 3800ಕ್ಕೂ ಹೆಚ್ಚು ಜನರನ್ನು ತಾತ್ಕಾಲಿಕ ವಸತಿ ಗೃಹಗಳಲ್ಲಿ ಇರಿಸಲಾಗಿದೆ. ಹಲವು ಮನೆ, ಕಟ್ಟಡಗಳು ಜಲಾವೃತಗೊಂಡು, ಅನೇಕ ವಾಹನ ಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ವರ್ಷದ ಮಳೆಯ ದುಪ್ಪಟ್ಟು ಧಾರೆ!: ಯುಎಇಯಲ್ಲಿ ಸಾಮಾನ್ಯವಾಗಿ ಒಂದು ವರ್ಷದಲ್ಲಿ ಸುರಿಯುವ ಮಳೆಯ ದುಪ್ಪಟ್ಟಿನಷ್ಟು ಒಂದೇ ವಾರದಲ್ಲಿ ಬಿದ್ದಿದೆ. ಶುಕ್ರವಾರ ಸುರಿದ ಮಳೆಯು ಕಳೆದ 30 ವರ್ಷಗಳಲ್ಲೇ ಅತ್ಯಧಿಕ ಎಂಬ ದಾಖಲೆಯನ್ನೂ ಬರೆದಿದೆ.

Advertisement

ಮನೆಯನ್ನು ತೊರೆಯಬೇಕಾಗಿ ಬಂದವರಿಗೆ ಸಮೀಪದ ಹೋಟೆಲ್‌ಗ‌ಳು ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ದುಬಾೖ ಉಪಾಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ರಶೀದ್‌ ಮನವಿ ಮಾಡಿದ್ದಾರೆ.

ಕಂದಹಾರ್‌ನಲ್ಲಿ ಅವಾಂತರ: ಅಫ್ಘಾನಿ ಸ್ಥಾನದ ದಕ್ಷಿಣ ಭಾಗದಲ್ಲಿರುವ ಕಂದ ಹಾರ್‌ ಪ್ರಾಂತ್ಯವೂ ಭಾರೀ ಮಳೆ ಮತ್ತು ಪ್ರವಾಹಕ್ಕೆ ಸಾಕ್ಷಿಯಾಗಿದೆ. ಏಕಾಏಕಿ ಸುರಿದ ಧಾರಾಕಾರ ಮಳೆಯಿಂದ 7 ಮಕ್ಕಳೂ ಸೇರಿದಂತೆ 8 ಮಂದಿ ಸಾವಿಗೀಡಾಗಿ, ನಾಲ್ವರು ಗಾಯಗೊಂಡಿದ್ದಾರೆ. ಹಲವಾರು ಮನೆಗಳು, ಸೇತುವೆಗಳು, ಕೃಷಿ ಭೂಮಿಗಳು ಪ್ರವಾಹದಿಂದ ಹಾನಿಗೀಡಾಗಿವೆ. ಒಂದು ವಾರದ ಅವಧಿಯಲ್ಲಿ ಅಫ್ಘಾನ್‌ನ ಹಲವು ಜಿಲ್ಲೆಗಳಲ್ಲಿ ಮಳೆ, ಪ್ರವಾಹಕ್ಕೆ 39 ಮಂದಿ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next