Advertisement

ಹೆಮ್ಮಾಡಿ ಸೇವಂತಿಗೆ ಹೂವು: ಉತ್ತಮ ಇಳುವರಿ; ಧಾರಣೆ ಇಳಿಮುಖ: ಬೆಳೆಗಾರನಿಗೆ ಸಿಹಿ-ಕಹಿ!

11:48 PM Jan 12, 2023 | Team Udayavani |

ಕುಂದಾಪುರ: ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರನಿಗೆ ಪ್ರಿಯವಾದ ಹೆಮ್ಮಾಡಿಯ ಸೇವಂತಿಗೆ ಈ ಬಾರಿ ಅತ್ಯುತ್ತಮ ಇಳುವರಿ ಬಂದಿದೆ. ಬೆಳೆಗಾರರಿಗೆ ಮಾತ್ರ ಸಿಹಿ-ಕಹಿಯ ಮಿಶ್ರ ಅನುಭವ. ಉತ್ತಮ ಇಳುವರಿ ಬಂದಿರುವುದು ಖುಷಿಯಾದರೆ, ಗರಿಷ್ಠ ಪ್ರಮಾಣದಲ್ಲಿ ಹೂವು ಬೆಳೆದ ಕಾರಣ ಬೆಲೆ ಮಾತ್ರ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಚಿಂತೆಗೆ ಕಾರಣ.

Advertisement

ಪ್ರತೀ ಬಾರಿ ಪ್ರತಿಕೂಲ ಹವಾಮಾನ ಹಾಗೂ ನುಸಿಬಾಧೆಯಿಂದಾಗಿ ಫಸಲು ಕಡಿಮೆಯಾಗುತ್ತಿದ್ದರೆ, ಈ ಬಾರಿ ಆಗಾಗ್ಗೆ ಬರುತ್ತಿದ್ದ ಉತ್ತಮ ಮಳೆಯಿಂದಾಗಿ, ಚಳಿ ಸಹಿತ ಉತ್ತಮ ವಾತಾವರಣದಿಂದಾಗಿ ಉತ್ತಮ ಇಳುವರಿ ಬಂದಿದೆ.

20 ಎಕರೆಗೂ ಅಧಿಕ
ಹೆಮ್ಮಾಡಿ ಗ್ರಾಮದ ಬಹುಭಾಗ, ಕಟ್‌ಬೆಲೂ¤ರು, ಕನ್ಯಾನ ಗ್ರಾಮಗಳ ಅಂದಾಜು 22 ಎಕರೆ ಪ್ರದೇಶಗಳಲ್ಲಿ ಸೇವಂತಿಗೆ ಬೆಳೆಯುತ್ತಾರೆ. ಹೆಮ್ಮಾಡಿಯಲ್ಲಿ 42 ಮಂದಿ, ಕಟ್‌ ಬೆಲೂ¤ರು ಗ್ರಾಮದ 6 ಮಂದಿ ಹಾಗೂ ಕನ್ಯಾನ ಗ್ರಾಮದ 6 ಮಂದಿ ಬೆಳೆಯುತ್ತಾರೆ.

ಹೇಗಿದೆ ಧಾರಣೆ?
ಒಂದು ಸಾವಿರ ಸೇವಂತಿಗೆ ಹೂವಿಗೆ ಕೆಲವು ದಿನದ ಹಿಂದೆ 150 ರೂ. ದರ ಇತ್ತು. ಆದರೆ ಈಗ 120, 130, 140 ರೂ. ಹೀಗೆ ಒಂದೊಂದು ರೀತಿಯ ಬೆಲೆಯಲ್ಲಿ ಖರೀದಿಯಾಗುತ್ತಿದೆ. 1 ಸಾವಿರ ಹೂವು ಕೊಯ್ದು ಕಟ್ಟಿ ಕೊಟ್ಟವರಿಗೆ 50 ರೂ. ಇದೆ. 120, 130 ರೂ.ನಲ್ಲಿ ಮಾರಾಟವಾದರೆ ಅದನ್ನು 4-5 ತಿಂಗಳಿನಿಂದ ಬೆಳೆಸಿ, ಪೋಷಿಸಿದವರಿಗೆ ಲಾಭವಿಲ್ಲದಂತಾಗಿದೆ. ಜಾತ್ರೆ ಸೀಸನ್‌ಗಿಂತ ಮೊದಲೇ ಹೂವು ಅರಳಿ, ಕೆಲವು ಕರಟಿ ಹೋಗಿರುವುದು ಸಹ ನಷ್ಟ ತಂದಿದೆ ಎನ್ನುತ್ತಾರೆ ಹೆಮ್ಮಾಡಿಯ ಸೇವಂತಿಗೆ ಬೆಳೆಗಾರರಾದ ಪ್ರಶಾಂತ್‌ ಭಂಡಾರಿ.

ಮಾರಣಕಟ್ಟೆಯಲ್ಲಿ ಗರಿಷ್ಠ ವ್ಯಾಪಾರ
ಹೆಮ್ಮಾಡಿ ಸೇವಂತಿಗೆಯನ್ನು ಬಹುಪಾಲು ಮಂದಿ ಬೆಳೆಸುವುದೇ ಮಾರಣಕಟ್ಟೆಯ ಹಬ್ಬಕ್ಕಾಗಿ. ಬ್ರಹ್ಮಲಿಂಗೇಶ್ವರನಿಗೆ ಸೇವಂತಿಗೆ ಅತ್ಯಂತ ಪ್ರಿಯವಾಗಿದ್ದು, ಬೆಳೆಗಾರರು ಮೊದಲ ಫಸಲನ್ನು, ಭಕ್ತರು ಜಾತ್ರೆಯ ದಿನ ಸೇವಂತಿಗೆ ಹೂವನ್ನೇ ಸಮರ್ಪಿಸುತ್ತಾರೆ. ಈ ಹೂವನ್ನು ಅರ್ಪಿಸಿ ಪ್ರಾರ್ಥಿಸಿದರೆ ಇಷ್ಟಾರ್ಥಗಳೆಲ್ಲ ಈಡೇರುತ್ತವೆ ಎನ್ನುವ ಪ್ರತೀತಿಯಿದೆ.

Advertisement

ಮಾರಣಕಟ್ಟೆ ಜಾತ್ರೆಯ ಬಳಿಕ ಉಡುಪಿ, ಮಂಗಳೂರು, ಭಟ್ಕಳ, ಹೊನ್ನಾವರದ ಗೆಂಡ, ವಾರ್ಷಿಕ ಉತ್ಸವಗಳಲ್ಲಿ ಮಾರಾಟವಾಗುತ್ತದೆ. ಕುಂದಾಪುರ, ಬೈಂದೂರು ಭಾಗದಲ್ಲಿ ಜನವರಿಯಿಂದ ಮಾರ್ಚ್‌ವರೆಗೂ ನಿರಂತರವಾಗಿ ದಿನಕ್ಕೆರಡು ದೇವಸ್ಥಾನ, ದೈವಸ್ಥಾನಗಳ ಗೆಂಡ- ಜಾತ್ರೆಗಳಿಗೆ ಹೆಮ್ಮಾಡಿ ಸೇವಂತಿಗೆಗೆ ಬೇಡಿಕೆಯಿರುವುದು ವಿಶೇಷ.

ಮಾರಣಕಟ್ಟೆ ಜಾತ್ರೆ ವೇಳೆಗೆ ಉತ್ತಮ ಇಳುವರಿ ಬಂದಿದೆ. ಆದರೆ ದರ ಮಾತ್ರ 120-140 ರೂ. ಇದ್ದು ಬೆಳೆಗಾರರಿಗೆ ಏನೇನು ಲಾಭವಿಲ್ಲ. ಕೊçದವರಿಗೆ ಬಹುಪಾಲು ಕೊಡಬೇಕಾಗುತ್ತದೆ. ಬೆಳೆದವರಿಗೆ ಲಾಭ ಸಿಗಬೇಕಾದರೆ 1 ಸಾವಿರ ಹೂವಿಗೆ ಕನಿಷ್ಠ 200 ರೂ. ಇರಬೇಕು.
– ಮಹಾಬಲ ದೇವಾಡಿಗ, ಅಧ್ಯಕ್ಷರು ಹೆಮ್ಮಾಡಿ ಸೇವಂತಿಗೆ ಬೆಳೆಗಾರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next