Advertisement

ಇಂದಿನಿಂದ 20 ದಿನ ಸೇವಾ ಪರ್ವ : ಪ್ರಧಾನಿ ಮೋದಿ ಜನ್ಮದಿನ; ದೇಶಾದ್ಯಂತ ಕಾರ್ಯಕ್ರಮ

10:29 AM Sep 17, 2021 | Team Udayavani |

ಹೊಸದಿಲ್ಲಿ: ಪ್ರಧಾನಿ ಮೋದಿಯವರ ಜನ್ಮದಿನವಾದ ಸೆ. 17ರಂದು ದೇಶಾದ್ಯಂತ ಬಿಜೆಪಿ ಮತ್ತು ಹಲವು ಸಂಘ ಸಂಸ್ಥೆಗಳು ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿವೆ.

Advertisement

ಬಿಜೆಪಿಯು ವಾರಾಣಸಿಯ ಭಾರತ್‌ ಮಾತಾ ದೇಗುಲದಲ್ಲಿ 71 ಸಹಸ್ರ ದೀಪಗಳನ್ನು ಬೆಳಗಿಸಲಿದೆ ಮತ್ತು ವಿವಿಧೆಡೆ ಒಟ್ಟು 14 ಕೋಟಿ ಪಡಿತರ ಚೀಲಗಳನ್ನು ವಿತರಿಸಲಿದೆ. ದೇಶಾದ್ಯಂತದ ಅಂಚೆ ಕಚೇರಿಗಳಿಂದ ಮೋದಿ ಚಿತ್ರವಿರುವ 5 ಕೋಟಿ ಪೋಸ್ಟ್‌ ಕಾರ್ಡ್‌ಗಳನ್ನು ಪ್ರಧಾನಿಗೆ ಕಳುಹಿಸಲು ಸಿದ್ಧತೆ ನಡೆದಿದೆ.

20 ದಿನಗಳ ಅಭಿಯಾನ:

ಗುಜರಾತ್‌ ಸಿಎಂ ಆಗಿ 13 ವರ್ಷ ಮತ್ತು ದೇಶದ ಪ್ರಧಾನಿಯಾಗಿ 7 ವರ್ಷಗಳು ಪೂರ್ಣಗೊಳಿಸುವುದರ ಜತೆಗೆ ಮೋದಿ ಅವರು ಒಟ್ಟು 20 ವರ್ಷಗಳಿಂದ ಸಾರ್ವಜನಿಕ ಸೇವೆ ಯಲ್ಲಿ ನಿರತರಾಗಿದ್ದಾರೆ. ಹೀಗಾಗಿ ಈ ಬಾರಿ 20 ದಿನಗಳ ಕಾಲ “ಸೇವೆ ಮತ್ತು ಸಮರ್ಪಣೆ ಅಭಿಯಾನ’ ನಡೆಸಲಾಗುವುದು ಎಂದು ಪಕ್ಷ ತಿಳಿಸಿದೆ.

ಒಂದೇ ದಿನ 30 ಲಕ್ಷ ಲಸಿಕೆ:

Advertisement

ಕರ್ನಾಟಕದಲ್ಲಿ ಶುಕ್ರವಾರ 30 ಲಕ್ಷ ಮಂದಿಗೆ ಕೊರೊನಾ ಮುನ್ನೆ ಚ್ಚರಿಕೆಯೊಂದಿಗೆ ಲಸಿಕೆ ವಿತರಿಸಲು ರಾಜ್ಯ ಸರಕಾರ ಸಿದ್ಧತೆ ನಡೆಸಿದೆ.

ನವಭಾರತ ಮೇಳ :

 

  • ಸೆ. 17ರಿಂದ ಅ. 7ರ ವರೆಗೆ 20 ದಿನಗಳ ಕಾಲ “ಸೇವೆ ಮತ್ತು ಸಮರ್ಪಣೆ ಅಭಿಯಾನ’.
  • ದೇಶಾದ್ಯಂತ “ನವ ಭಾರತ ಮೇಳ’ ಆಯೋಜನೆ. 7 ವರ್ಷಗಳಲ್ಲಿ ಮೋದಿ ಸರಕಾರ ಮಾಡಿದ ಸಾಧನೆಯನ್ನು ಜನರಿಗೆ ವಿವರಿಸುವ ಯತ್ನ.
  • ಸ್ವಚ್ಛತಾ ಕಾರ್ಯಕ್ರಮ, ರಕ್ತದಾನ ಶಿಬಿರ ಮತ್ತು ರಸಪ್ರಶ್ನೆಗಳ ಆಯೋಜನೆ.
  • ವಿವಿಧ ಕ್ಷೇಮಾಭಿವೃದ್ಧಿ ಯೋಜನೆಗಳ ಫ‌ಲಾನುಭವಿ ಗಳಾಗಲು ಇಚ್ಛಿಸುವವರ ನೋಂದಣಿಗೆ ಕೇಂದ್ರಗಳ ಸ್ಥಾಪನೆ.
  • ಜನರು ನಮೋ ಆ್ಯಪ್‌ ಡೌನ್‌ಲೋಡ್‌ ಮಾಡಿ ಕೊಳ್ಳುವಂತೆ ಪ್ರೇರಣೆ ನೀಡಲು ವಿಶೇಷ ಕೇಂದ್ರ.
  • ಅ. 2ರಂದು “ಸ್ವತ್ಛತಾ ಸೇ ಸಮ್ಮಾನ್‌’ ಅಭಿಯಾನ ಆಯೋಜನೆ. ಸ್ವತ್ಛತೆ ಮತ್ತು ಸಸಿ ನೆಡುವ ಕಾರ್ಯಕ್ರಮ.

ಕೃತಕ ಕಾಲು ಜೋಡಣೆ :

ಜೈಪುರ್‌ ಫ‌ೂಟ್‌ ಯುಎಸ್‌ಎ ಸಂಸ್ಥೆಯು ಗುಜರಾತ್‌ನಲ್ಲಿ ಸಂಚಾರಿ ವ್ಯಾನ್‌ ಮೂಲಕ ಅಂಗವಿಕಲರಿಗೆ ಉಚಿತವಾಗಿ ಕೃತಕ ಕಾಲು ಜೋಡಣೆ ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿದೆ. ವಡ್ನಾಗರ್‌ನಲ್ಲಿ ಮೋದಿ ಹಿರಿಯ ಸಹೋದರ ಸೋಮಭಾಯಿ ಮೋದಿ ಶುಕ್ರವಾರ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಕರ್ನಾಟಕ: ಸೇವೆ-ಸಮರ್ಪಣೆ :

  • ಸೆ. 17- ಅ. 7: ಸೇವೆ ಮತ್ತು ಸಮರ್ಪಣೆ ಅಭಿಯಾನ.
  • ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ, ಉಚಿತ ಆರೋಗ್ಯ ತಪಾಸಣ ಶಿಬಿರಗಳು.
  • ಅಂಗವಿಕಲರಿಗೆ ನೆರವು.
  • ಅ. 2ರಂದು ಸ್ವದೇಶಿ ವಸ್ತು ಖರೀದಿ ಅಭಿಯಾನ.
  • ಮೋದಿಯವರಿಗೆ ಶುಭ ಹಾರೈಸಿ, ಅವರ ಕೊಡುಗೆಗಳಿಗೆ ಧನ್ಯವಾದ ಸಲ್ಲಿಸಿ 5 ಕೋಟಿ ಪೋಸ್ಟ್‌ಕಾರ್ಡ್‌ಗಳನ್ನು ಜನರೇ ಬರೆಯುವಂತೆ ಪ್ರೇರೇಪಿಸುವುದು.
  • ಪ್ರತೀ ಬೂತ್‌ನಿಂದ 10 ಅಂಚೆ ಕಾರ್ಡ್‌ ಬರೆಯುವ ಗುರಿ.
Advertisement

Udayavani is now on Telegram. Click here to join our channel and stay updated with the latest news.

Next