ಹೊಳೆನರಸೀಪುರ: ರಸ್ತೆ ಸುರಕ್ಷತೆ ಮತ್ತು ವಾಹನಗಳ ಓಡಾಟಕ್ಕೆ ನೀತಿ ನಿಯಮ ಗಳಿದ್ದರೂ, ಪಟ್ಟಣದಲ್ಲಿ ಅವುಗಳನ್ನು ಅನುಷ್ಠಾನಕ್ಕೆ ತರದೇ ಇರುವು ದರಿಂದ ಬಹಳಷ್ಟು ಪ್ರಯಾಣಿಕರು ಮತ್ತು ವಾಹನಗಳ ಸಂಚಾರಕ್ಕೆ ಭಾರೀ ತೊಂದರೆ ಅನುಭವಿಸುವಂತಾಗಿದೆ.
ದಿನ ನಿತ್ಯ ಅರಸೀಕೆರೆ ಮೈಸೂರು, ಮೈಸೂರು ಕಡೆಯಿಂದ ಅರಸೀಕರೆಗೆ ತೆರಳುವ ಸುಮಾರು ಹತ್ತುಕ್ಕು ಹೆಚ್ಚು ರೈಲು ಸಂಚಾರ ನಡೆಯಲಿದೆ. ಸಂಚಾ ರದ ವೇಳೆ ಗೇಟ್ ಹಾಕುವುದು ಮಾಮೂಲಿ ಆದರೆ ಪ್ರತಿಬಾರಿಯೂ ಗೇಟ್ ಹಾಕಿದ ವೇಳೆಯಲ್ಲಿ ದ್ವಿಚಕ್ರ, ಕಾರು, ಲಾರಿ ಬಸ್ಸುಗಳು ಎಡಬದಿಯಲ್ಲಿ ನಿಲ್ಲಿಸಿಕೊಂಡು ಗೇಟ್ ತಗೆದ ನಂತರ ತೆರಳಬೇಕು. ಆದರೆ, ಕೆಲವು ವಾಹನಗಳು ನೇರವಾಗಿ ಗೇಟ್ ಬಲಭಾಗಕ್ಕೆ ತಂದು ನಿಲ್ಲಿಸುವುದರಿಂದ ರೈಲು ಹೋದ ನಂತರ ವಾಹನಗಳು ಗೇಟ್ ದಾಟಲು ಸಾಕಷ್ಟು ಪರದಾಡುವ ಜೊತೆಗೆ ಸಾಕಷ್ಟು ಸಮಯ ವ್ಯರ್ಥ ವಾಗುತ್ತಿದೆ. ಈ ಬಗ್ಗೆ ವಾಹನ ಸವಾರರು ಬಲಭಾಗಕ್ಕೆ ಬರುವ ವಾಹನ ಸವಾರರಿಗೆ ತಮ್ಮ ಹಿಂಬದಿಯಲ್ಲಿ ನಿಲ್ಲಿಸಿಕೊಳ್ಳುವಂತೆ ಮನವಿ ಮಾಡಿದರೆ ಬಲಭಾಗಕ್ಕೆ ಬಂದು ನಿಲ್ಲುವ ವಾಹನ ಸವಾರರು ಮತ್ತು ಚಾಲಕರು ಗಳು ಮನವಿ ಮಾಡಿದವರ ಮೇಲೆ ಜಗಳಕ್ಕೆ ನಿಲ್ಲುತ್ತಾರೆ.
ಈ ಸಮಸ್ಯೆ ಪರಿಹರಿಸಲು ಪೊಲೀಸ್ ಇಲಾಖೆ ರೈಲು ಗೇಟ್ ಬಂದ್ ವೇಳೆ ವಾಹನ ಸವಾರರನ್ನು ತಹಬದಿಗೆ ತರಲು ನಾಲ್ಕಾರು ದಿನಗಳು ಪೊಲೀಸ್ ಪೇದೆಯೊಬ್ಬರನ್ನು ನೇಮಕ ಮಾಡಿ ಆಗುತ್ತಿರುವ ಸಮಸ್ಯೆ ಪರಿಹರಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.
Advertisement
ಪಟ್ಟಣದ ಹೃದಯ ಭಾಗ ಚನ್ನಾಂಬಿಕಾ ಚಿತ್ರ ಮಂದಿರದ ಪಕ್ಕ ಮತ್ತು ಬೆಂಗಳೂರಿಗೆ ತೆರಳುವ ಸೂರನಹಳ್ಳಿ ಗೇಟ್ ಬಳಿ ರೈಲ್ವೆ ಗೇಟ್ ಇದ್ದು ಇಲ್ಲಿಂದ ಹಾದು ಹೋಗುವ ಬಹಳಷ್ಟು ಮಂದಿ ರೈಲು ಹಾದು ಹೋಗುವ ವೇಳೆ ರಸ್ತೆ ಎಡಭಾಗದಲ್ಲಿ ನಿಂತು ಹೋಗುವುದು ಮಾಮೂಲಿ. ಆದರೆ ಹೊಳೆನರಸೀಪುರ ದಲ್ಲಿ ರಸ್ತೆ ಸುರಕ್ಷತೆ ನೀತಿ ನಿಯಮಗಳು ಅನುಸರಿಸಬೇಕಾದವರೇ ಅನುಸರಿಸದೇ ಹೋಗುತ್ತಿರುವುದು ಸಾರ್ವಜನಿಕರಿಗೆ ಮತ್ತು ವಾಹನಗಳ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ.