Advertisement

Defamation case; ಸಂಜಯ್ ರಾವತ್‌ಗೆ ಸೆಷನ್ಸ್ ಕೋರ್ಟ್ ನಿಂದ ಜಾಮೀನು, ಶಿಕ್ಷೆ ಅಮಾನತು

08:37 PM Oct 25, 2024 | Team Udayavani |

ಮುಂಬಯಿ: ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ ಪತ್ನಿ ಮೇಧಾ ಸೋಮಯ್ಯ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್‌ ಅವರಿಗೆ ಸೆಷನ್ಸ್ ನ್ಯಾಯಾಲಯ ಶುಕ್ರವಾರ(ಅ25) ಜಾಮೀನು ನೀಡಿದ್ದು, ಕೆಳ ನ್ಯಾಯಾಲಯ ನೀಡಿದ್ದ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿದೆ.

Advertisement

ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧ ರಾಜ್ಯಸಭಾ ಸದಸ್ಯ ರಾವತ್‌ ಸಲ್ಲಿಸಿದ್ದ ಪರಿಷ್ಕರಣೆ ಅರ್ಜಿಯನ್ನು ನ್ಯಾಯಾಧೀಶ ಸಂಜೀವ್ ಪಿಂಗಳೆ ಒಪ್ಪಿಕೊಂಡಿದ್ದಾರೆ. ರಾವತ್ ಅವರು ಸೆಷನ್ಸ್ ಕೋರ್ಟ್‌ಗೆ ಖುದ್ದಾಗಿ ಹಾಜರಾಗಿದ್ದರು.

ಕಿರೀಟ್ ಸೋಮಯ್ಯ ಅವರ ಪರ ವಕೀಲ ಲಕ್ಷ್ಮಣ್ ಕನಾಲ್ ಅವರು ನ್ಯಾಯಾಲಯಕ್ಕೆ ಜಾಮೀನು ನೀಡಲು ತಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದರು. ನಂತರ ನ್ಯಾಯಾಲಯವು ರಾವತ್ ಅವರ ಪರಿಷ್ಕರಣೆ ಮನವಿಯನ್ನು ಒಪ್ಪಿಕೊಂಡು 50,000 ರೂ ಬಾಂಡ್ ಮೇಲೆ ಜಾಮೀನು ನೀಡಿತು. ನ್ಯಾಯಾಲಯ 2025 ಜನವರಿ 31ರಂದು ಈ ವಿಷಯದಲ್ಲಿ ಅಂತಿಮ ವಾದಗಳನ್ನು ಆಲಿಸಲಿದೆ.

ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಪ್ರಥಮ ದರ್ಜೆ) ಆರತಿ ಕುಲಕರ್ಣಿ ಅವರು ಸೆಪ್ಟೆಂಬರ್ 26 ರಂದು ಭಾರತೀಯ ದಂಡ ಸಂಹಿತೆ ಸೆಕ್ಷನ್ 500 ರ ಅಡಿಯಲ್ಲಿ ರಾವತ್ ಮಾನನಷ್ಟ ಅಪರಾಧಿ ಎಂದು ತೀರ್ಪು ನೀಡಿ 15 ದಿನಗಳ ಜೈಲು ಶಿಕ್ಷೆಯ ಜತೆಗೆ, 25,000 ರೂ.ದಂಡ ವಿಧಿಸಿದ್ದರು. ಆದಾಗ್ಯೂ, ಮೇಲ್ಮನವಿ ಸಲ್ಲಿಸಲು ಅನುವು ಮಾಡಿಕೊಟ್ಟು ಮ್ಯಾಜಿಸ್ಟ್ರೇಟ್ ಶಿಕ್ಷೆಯನ್ನು 30 ದಿನಗಳವರೆಗೆ ಅಮಾನತುಗೊಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next