Advertisement

ವಿಧಾನಸೌಧದಲ್ಲೇ ಅಧಿವೇಶನ; ಸಾರ್ವಜನಿಕರಿಗಿಲ್ಲ ಪ್ರವೇಶ ಹಿರಿಯರಿಗೆ ವಿನಾಯಿತಿ?

12:07 AM Aug 25, 2020 | mahesh |

ಬೆಂಗಳೂರು: ವಿಧಾನಸೌಧದಲ್ಲೇ ವಿಧಾನ ಮಂಡಲ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದ್ದು, ಕೊರೊನಾ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳಲು ಪ್ರತೀ ಎರಡು ಆಸನಗಳ ಮಧ್ಯೆ ಫೈಬರ್‌ ಗ್ಲಾಸ್‌ ಪರದೆ ಅಳವಡಿಸಲು ನಿರ್ಧರಿಸಲಾಗಿದೆ.

Advertisement

ಅಧಿವೇಶನ ನಡೆಸುವ ಸಂಬಂಧ ಸೋಮವಾರ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಜತೆಗೂಡಿ ವಿಧಾನಸಭೆ ಸಭಾಂಗಣವನ್ನು ಪರಿಶೀಲಿಸಿದರು. ಅಂತಿಮವಾಗಿ ಅಲ್ಲೇ ಅಧಿವೇಶನ ನಡೆಸಲು ತೀರ್ಮಾನಿಸಲಾಯಿತು.

ಬೆಂಗಳೂರಿನಲ್ಲೇ ಮಳೆಗಾಲದ ಅಧಿವೇಶನ ನಡೆಸಲು ಸರಕಾರ ತೀರ್ಮಾನಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಎಪ್ಪತ್ತು ವರ್ಷ ಮೇಲ್ಪಟ್ಟವರು ಅಧಿವೇಶನದಲ್ಲಿ ಭಾಗವಹಿಸಬೇಕೇ ಬೇಡವೇ ಎಂಬುದರ ಬಗ್ಗೆ ಸದ್ಯದಲ್ಲೇ ಸ್ಪೀಕರ್‌ ನಿರ್ಧರಿಸಲಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಸೆ.21ರಿಂದ 30ರ ವರೆಗೆ ಅಧಿವೇಶನ ನಡೆಯಲಿದೆ. ವಿಧಾನಸಭೆ ಸಭಾಂಗಣದಲ್ಲಿ 274 ಆಸನಗಳಿದ್ದು, ಎರಡು ಆಸನಗಳ ನಡುವೆ ಪರದೆ ಹಾಕಲಾಗುತ್ತದೆ. ವಿಧಾನಪರಿಷತ್‌ನಲ್ಲೂ ಅದೇ ರೀತಿ ಕ್ರಮ ಕೈಗೊಳ್ಳಲಾಗುವುದು. ಪ್ರತೀ ಸದಸ್ಯರಿಗೆ ಫೇಸ್‌ ಶೀಲ್ಡ್‌, ಮಾಸ್ಕ್, ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗುವುದು ಎಂದರು.

ಮಿತ ಸಂಖ್ಯೆಯ ಅಧಿಕಾರಿಗಳು
ಈ ಬಾರಿ ಅಧಿವೇಶನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗುವುದು. ಒಂದು ಇಲಾಖೆಯಿಂದ ಒಬ್ಬ ಅಧಿಕಾರಿಗೆ ಮಾತ್ರ ಅವಕಾಶ ಇರಲಿದೆ. ಸಚಿವರ ಜತೆ ಒಬ್ಬ ಆಪ್ತ ಸಹಾಯಕರಿಗೆ ಮಾತ್ರ ಅವಕಾಶ ಇರುತ್ತದೆ. ಪತ್ರಕರ್ತರಿಗೂ ಎರಡು ಗ್ಯಾಲರಿ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next