ಬೈಲಹೊಂಗಲ: ಭಾರತೀಯ ಸೇನೆಯಲ್ಲಿ ಇಪ್ಪತ್ತು ವರ್ಷ ಸೇವೆ ಸಲ್ಲಿಸಿ, ಸೇವಾ ನಿವೃತ್ತರಾಗಿ ಬಂದ ಯೋಧ ವೆಂಕಪ್ಪ ಆಸಂಗಿ ಅವರಿಗೆ ಮಾಜಿ ಸೆ„ನಿಕರು, ಕುಟುಂಬಸ್ಥರು ಅದ್ಧೂರಿ ಸ್ವಾಗತ ಕೋರಿದರು.
ಪಟ್ಟಣದ ಕಿತ್ತೂರು ಚನ್ನಮ್ಮನ ವೃತ್ತದಿಂದ ಎಪಿಎಂಸಿ ಗಣೇಶ ದೇವಸ್ಥಾನ, ಇಂಚಲ ಕ್ರಾಸ್, ಬಸ್ ನಿಲ್ದಾಣ, ರಾಯಣ್ಣ ವೃತ್ತ ಮಾರ್ಗವಾಗಿ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ನಡೆಸಿದರು. ರಸ್ತೆಯುದ್ದಕ್ಕೂ ಭಾರತ ಮಾತಾಕೀ ಜೈ, ವಂದೇ ಮಾತರಂ ಘೋಷಣೆಗಳು ಮೊಳಗಿದವು. ವಿಜಯ ಸೋಶಿಯಲ್ ಕ್ಲಬ್ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ಮಹಾಂತೇಶ ಕೌಜಲಗಿ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಉದ್ಘಾಟಿಸಿ, ಯೋಧರಾಗಿ ದೇಶ ಸೇವೆ ಮಾಡುವುದು ಪುಣ್ಯದ ಕೆಲಸವಾಗಿದೆ ಎಂದರು.
ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸೆ„ನಿಕರ ಸಂಘದ ಅಧ್ಯಕ್ಷ ಬಸಪ್ಪ ಗುರವನ್ನವರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಖಾಸYತೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕಾಶಿನಾಥ ಬಿರಾದರ, ಕ್ಯಾಪ್ಟನ್ ಮಡಿವಾಳಯ್ಯ ಪೂಜಾರಿ, ಯೋಧನ ಪತ್ನಿ ಶಿಲ್ಪಾ ಅಸಂಗಿ, ತಾಯಿ ವೆಂಕವ್ವ ಅಸಂಗಿ ವೇದಿಕೆಯಲ್ಲಿ ಇದ್ದರು.
ಶಿಕ್ಷಕ ಎಸ್.ವಿ.ಯರಗಡ್ಡಿ ನಿರೂಪಿಸಿದರು. ಮಂಜುನಾಥ ರೆಡ್ಡಿ ಪರಿಚಯಿಸಿದರು. ಮಾಜಿ ಸೆ„ನಿಕ ಗಂಗಪ್ಪ ಗುಗ್ಗರಿ ಸ್ವಾಗತಿಸಿದರು. ಅಶೋಕ ಗಿರೆನ್ನವರ, ಪ್ರೇಮಾ ಗಿರೆನ್ನವರ, ಮಂಜುನಾಥ ರೆಡ್ಡಿ, ರಾಮಪ್ಪ ಬೆಳಗಾವಿ, ಬಸಪ್ಪ ಗುರುವನ್ನವರ, ಪಂಚಾಕ್ಷರಯ್ಯ ಹಿರೇಮಠ, ಗಿರೀಶ ಅರಿಬೆಂಚಿ, ಚೇತನ ಹೊಸಕೋಟಿ, ಬಡವಯ್ಯ ಪೂಜೇರ, ದುಂಡಪ್ಪ ಗೀರೆನ್ನವರ, ಕುಮಾರ ಹಿರೇಮಠ, ಮಹಾಂತೇಶ ಗಿರೆನ್ನವರ, ಸಂಜನಾ ರೆಡ್ಡಿ, ವಿ.ಸಿ.ಗುರುನಗೌಡರ, ಮಾಜಿ ಸೆ„ನಿಕರು, ಅನೇಕರು ಇದ್ದರು.