Advertisement

ಅಗ್ಗದ ದರದಲ್ಲಿ 5ಜಿ ಸೇವೆ: ವೈಷ್ಣವ್‌

08:56 PM Aug 04, 2022 | Team Udayavani |

ನವದೆಹಲಿ: ದೇಶದಲ್ಲಿ 5ಜಿ ಸೇವೆ ಅಕ್ಟೋಬರ್‌ನಿಂದಲೇ ಆರಂಭವಾಗುವ ಸಾಧ್ಯತೆ ಇದೆ ಮತ್ತು ಅದು ಕೈಗೆಟಕುವ ದರದಲ್ಲೇ ಸಿಗಲಿದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿ‌ನಿ ವೈಷ್ಣವ್‌ ತಿಳಿಸಿದ್ದಾರೆ.

Advertisement

ಗುರುವಾರ “ಇಂಡಿಯಾ ಟುಡೇ’ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ನಮ್ಮ ದೇಶದ 5ಜಿ ಸಂಪರ್ಕ ಜಗತ್ತಿನಲ್ಲಿಯೇ ಅತ್ಯಂತ ಅಗ್ಗದ ದರದಲ್ಲಿ ಇರಲಿದೆ’ ಎಂದು ಪ್ರತಿಪಾದಿಸಿದ್ದಾರೆ.

ಆ.10ರ ಒಳಗಾಗಿ ಬಿಡ್‌ನ‌ಲ್ಲಿ ಭಾಗವಹಿಸಿರುವ ಕಂಪನಿಗಳಿಗೆ ಹೊಸ ತಲೆಮಾರಿನ ತರಂಗಾಂತರಗಳನ್ನು ಹಂಚಿಕೆ ಮಾಡಲಾಗುತ್ತದೆ. ಬಿಎಸ್‌ಎನ್‌ಎಲ್‌ನ ಬಲವರ್ಧನೆಗೆ ಎಲ್ಲಾ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ ಅಶ್ವಿ‌ನಿ ವೈಷ್ಣವ್‌.

Advertisement

Udayavani is now on Telegram. Click here to join our channel and stay updated with the latest news.

Next