Advertisement

ಸಮಾಜ ಸಂಘಟನೆ ಜತೆ ಸೇವಾ ಕಾರ್ಯ ಅವಶ್ಯ

01:22 PM Dec 09, 2017 | |

ಹುಬ್ಬಳ್ಳಿ: ಸಮಾಜದ ಸಂಘಟನೆಯ ಮೂಲಕ ಸೇವಾ ಕಾರ್ಯ ಕೈಗೊಳ್ಳಬೇಕು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು. ಗೋಕುಲ ರಸ್ತೆಯ  ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲ್ಯಾಣ ಕೇಂದ್ರದಲ್ಲಿ ಶುಕ್ರವಾರ ನಡೆದ ವಾಯವ್ಯ ಸಾರಿಗೆ ಗಂಗಾಮತಸ್ಥರ ನೌಕರರ ಹಾಗೂ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

Advertisement

ಸಮಾಜ ಒಗ್ಗೂಡಿಕೊಂಡು ಸೌಹಾರ್ದಯುತವಾಗಿ  ಮುನ್ನಡೆದಾಗ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ. ಅಂಬಿಗರ ಚೌಡಯ್ಯ ಪ್ರತಿಮೆ ಸ್ಥಾಪನೆ ಅಗತ್ಯವಿದೆ. ಈ ಕಾರ್ಯಕ್ಕೆ ಸರಕಾರದ ನೆರವು  ಬೇಕಾದರೆ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡುತ್ತೇನೆ.

ಗಂಗಾಮತಸ್ಥ ಸಮಾಜವನ್ನು ಎಸ್‌ಟಿ ಸೇರಿಸಬೇಕು ಎಂಬ ಬಹುವರ್ಷಗಳ ಬೇಡಿಕೆಯಿದೆ. ಸಮಾಜದ ಮುಖಂಡರು ಬಂದರೆ ನಮ್ಮ ನಾಯಕರ ಮೂಲಕ ಕೇಂದ್ರ ಸಚಿವರಿಗೆ ಮನವಿ ಮಾಡುವುದಾಗಿ ಹೇಳಿದರು. ವಾಯವ್ಯ ಸಾರಿಗೆ  ಗಂಗಾಮತಸ್ಥ ಸಂಘದ ಗೌರವಾಧ್ಯಕ್ಷ ಮನೋಜ ಕರ್ಜಗಿ ಮಾತನಾಡಿ, ಸಂಸ್ಥೆಯ ಎಲ್ಲಾ ಸಮಾಜದ ಸಂಘಟನೆಗಳೊಂದಿಗೆ  ಸಾಮರಸ್ಯದೊಂದಿಗೆ ಸಂಸ್ಥೆ ಏಳ್ಗೆಗೆ ಶ್ರಮಿಸಬೇಕು.

ಸಂಘಟನೆ ಹಾಗೂ ಜೀವನದಲ್ಲಿ ಅಂಬಿಗರ ಚೌಡಯ್ಯನವರ ತತ್ವಗಳನ್ನು ಅನುಸರಿಸಬೇಕು. ರಾಜ್ಯದಲ್ಲಿ 60-70 ಲಕ್ಷ ಜನ  ಸಂಖ್ಯೆಯುಳ್ಳ ಗಂಗಾಮತ ಸಮಾಜವನ್ನು ಎಸ್‌ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು. ವಾಕರಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿದರು.

ಎಲ್ಲಾ ಸಂಘಟನೆಗಳೂ ಒಗ್ಗಟ್ಟಾಗಿ ನಮ್ಮ ಜೀವನಕ್ಕೆ ಆಧಾರವಾಗಿರುವ ಸಾರಿಗೆ ಸಂಸ್ಥೆಯನ್ನು ಪ್ರಗತಿಯತ್ತ ಕೊಂಡೊಯ್ಯಬೇಕು ಎಂದರು. ಶ್ರೀ ಅಂಬಿಗರ ಚೌಡಯ್ಯ ಅವರ ಭಾವಚಿತ್ರ ಅನಾವರಣಗೊಳಿಸಲಾಯಿತು. ಸಮಾಜದ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ನರಶಿಪುರ  ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

Advertisement

ವಾಕರಸಾ ಸಂಸ್ಥೆಯ ಮುಖ್ಯ ಕಾರ್ಮಿಕರ  ಕಲ್ಯಾಣಾಧಿಕಾರಿ ಎಸ್‌.ಕೆ. ಹಳ್ಳಿ, ಮುಖ್ಯ ಲೆಕ್ಕಾಧಿಕಾರಿ ಶಾಂತಪ್ಪ ಗೋಟಖಂಡಕಿ, ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ರಾಜೇಶ ಹುದ್ದಾರ, ತಾಂತ್ರಿಕ  ಶಿಲ್ಪಿ ರಾಜಕುಮಾರ, ಘಟಕ ವ್ಯವಸ್ಥಾಪಕ ಬಸಪ್ಪ ಪೂಜಾರಿ, ಕೆ.ಆರ್‌. ಧರ್ಮಪ್ಪ, ಅಂಬಿಕಾ ಜಾಲಗಾರ, ಸಂಘದ ಅಧ್ಯಕ್ಷ ಹನುಮಂತಪ್ಪ ಇಟಗಿ  ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next