ಕಾರ್ಕಳ: ಉಡುಪಿ ಜಿಲ್ಲೆ ಅಂಬಲಪಾಡಿಯ ಗ್ರಾಹಕ ಸುಶಾಂತ ಶೆಟ್ಟಿಯವರು ಫೋರ್ಡ್ ಫಿಗೊ ಡ್ಯುರೇಟರ್ ಕ್ಯೂ ಕಾರಿನ ಮಾಲಕರಾಗಿದ್ದು ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಕಂಪೆನಿ ಬಳಿ ಸ್ವ-ಅಪಘಾತ ವಿಮೆ ಪಾಲಿಸಿ ಪಡೆದಿದ್ದರು. ಅದರ ವಿಮಾ ಘೋಷಿತ ಮೌಲ್ಯ (ಐಡಿವಿ) 2,10,043.00 ರೂ. ಆಗಿದ್ದು, ಅಪಘಾತವಾದ ತನ್ನ ಕಾರಿನ ವಿಮಾ ಮೌಲ್ಯವನ್ನು ಕಂಪೆನಿಯವರು ನೀಡದ ಕಾರಣ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆಹೋಗಿದ್ದರು.
ವಿಮಾ ಕಂಪೆನಿಯ ಸೇವಾ ನ್ಯೂನತೆ ಸಾಬೀತು ಹಿನ್ನೆಲೆ ವಿಮಾ ಘೋಷಿತ ಮೌಲ್ಯ (ಐಡಿವಿ) 2,10,043 ಅನ್ನು 2020 ಜುಲೈ 3ರಿಂದ ಶೇ. 9 ಬಡ್ಡಿಯೊಂದಿಗೆ ಮಾನಸಿಕ ಹಿಂಸೆ, ದೈಹಿಕ ಶ್ರಮ, ತೊಂದರೆ ಇತ್ಯಾದಿ ಗಳಿಗೆ ಪರಿಹಾರವಾಗಿ 25,000 ರೂ.,ವ್ಯಾಜ್ಯ ಖರ್ಚು 10,000 ರೂ., ತಿಳಿವಳಿಕೆ ಶುಲ್ಕ 2,500ಯನ್ನು ಆದೇಶದ 45 ದಿನದೊಳಗೆ ನೀಡುವಂತೆ ಎ.29ರಂದು ಸುಜಾತ ಬಿ. ಕೋರಳ್ಳಿ, ಈ. ಪ್ರೇಮಾ ಸದಸ್ಯರು, ಸುನೀಲ ತಿ. ಮಾಸರಡ್ಡಿ ಅಧ್ಯಕ್ಷರನ್ನೊಳಗೊಂಡ ಮಾನ್ಯ ಉಡುಪಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಪೀಠವು ಆದೇಶಿಸಿದೆ.
ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಪೀಠವು ಆದೇಶಿಸಿದೆ. ದೂರುದಾರರ ಪರವಾಗಿ ಕಾರ್ಕಳದ ನ್ಯಾಯವಾದಿ ವಿವೇಕಾನಂದ ಮಲ್ಯ ವಾದಿಸಿದ್ದರು.