Advertisement
ಉಡುಪಿಯಲ್ಲಿ ಬೆಳಗ್ಗಿನಿಂದಲೇ ಸರ್ವರ್ ಸಮಸ್ಯೆ ಉಂಟಾಯಿತು. ಬಂದ ಗ್ರಾಹಕರು ಕಾರಿಡಾರ್‌ನಲ್ಲಿ ಕುಳಿತು ಕಾಲ ಕಳೆಯಬೇಕಾಯಿತು. ಅಪರಾಹ್ನ 2.30ರ ಬಳಿಕ ಸಮಸ್ಯೆ ಬಗೆಹರಿಯಿತು. ಮೊದಲೇ ದಿನಾಂಕ ನಿಗದಿಪಡಿಸಿಕೊಂಡು ದೂರದೂರು ಗಳಿಂದ ಬಂದ ಗ್ರಾಹಕರಿಗೆ ಹಿಂದೆಯೂ ಇಂತಹ ಕಹಿ ಅನುಭವ ವಾಗಿತ್ತು. ಇಂತಹವರು ಮರುದಿನ ವಾಪಸು ಹೋಗಲು ಟಿಕೆಟ್ ಕಾದಿರಿಸುತ್ತಿದ್ದು ಪರಿತಪಿಸು ತ್ತಿದ್ದರು. ಸರ್ವರ್ ಸಮಸ್ಯೆಯಿಂದ ಸರಕಾರಕ್ಕೂ ನಷ್ಟ ಉಂಟಾಗುತ್ತಿದೆ.
ಮಂಗಳೂರಿನ ಜಿಲ್ಲಾ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲೂ ಜನರು ಸಮಸ್ಯೆ ಎದುರಿಸುವಂತಾಯಿತು. ನಗರದ ಮಿನಿ ವಿಧಾನಸೌಧದಲ್ಲಿ ರುವ ರಿಜಿಸ್ಟ್ರಾರ್ ಕಚೇರಿಯಲ್ಲಿ ಗುರುವಾರ ಮಧ್ಯಾಹ್ನ ದಿಂದಲೇ ಸಮಸ್ಯೆ ಆರಂಭವಾಗಿತ್ತು. ಶುಕ್ರವಾರ ಮಧ್ಯಾಹ್ನ ದವರೆಗೂ ಸರ್ವರ್ ಸಮಸ್ಯೆ ಸರಿಯಾಗಿರಲಿಲ್ಲ. ಆದರೆ ನಗರ ಕಚೇರಿಯ ಸರ್ವರ್ ಸಂಜೆಯ ವೇಳೆ ಸರಿಯಾದರೂ ಗ್ರಾಮಾಂತರ ಕಚೇರಿಯ ಸರ್ವರ್ ಸಂಜೆಯವರೆಗೂ ಸರಿ ಇರಲಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
Related Articles
Advertisement