Advertisement

ಪಡಿತರ ವಿತರಣೆಗೆ ಸರ್ವರ್‌ ಸಮಸ್ಯೆ

03:18 PM Mar 10, 2020 | Suhan S |

ಬೀಳಗಿ: ಎಲ್ಲ ವಿಧದ ಪಡಿತರ ಚೀಟಿಗಳ ಸದಸ್ಯರು  ಇ-ಕೆವೈಸಿ ಯೋಜನೆಯಡಿ ಕಡ್ಡಾಯವಾಗಿ ಬಯೋಮೆಟ್ರಿಕ್‌ ದೃಢಿಕರಣ ಹೊಂದಬೇಕು. ಆದರೆ, ಸರ್ವರ್‌ ಸಮಸ್ಯೆಯಿಂದಾಗಿ ಇ-ಕೆವೈಸಿ ಪ್ರಗತಿ ಕುಂಟುತ್ತ ಸಾಗಿದೆ. ಪರಿಣಾಮ, ನಿತ್ಯವೂ ನೂರಾರು ಪಡಿತರ ಕಾರ್ಡ್‌ದಾರರು ತಮ್ಮ ಕೆಲಸವನ್ನು ಬದಿಗೊತ್ತಿ ಇಡೀ ದಿವಸ ನ್ಯಾಯಬೆಲೆ ಅಂಗಡಿಗಳ ಮುಂದೆ ಸರದಿ ನಿಲ್ಲುವಂತಾಗಿದೆ.

Advertisement

ಇ-ಕೆವೈಸಿ ಕಡ್ಡಾಯ: ಅಂತ್ಯೋದಯ, ಬಿಪಿಎಲ್‌, ಎಪಿಎಲ್‌ ಪಡಿತರ ಚೀಟಿ ಹೊಂದಿದ ಎಲ್ಲ ಸದಸ್ಯರು ಇ-ಕೆವೈಸಿ ಕಡ್ಡಾಯವಾಗಿ ಮಾಡಿಸಿಕೊಳ್ಳುವಂತೆ ಸರಕಾರದ ಆದೇಶದಂತೆ ಈಗಾಗಲೇ ಪ್ರತಿ ತಿಂಗಳು 1ರಿಂದ 10ನೇ ದಿನಾಂಕದವರೆಗೆ ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿ ಸದಸ್ಯರ ಬಯೋಮೆಟ್ರಿಕ್‌ ದೃಢೀಕರಣ ಆರಂಭವಾಗಿದೆ. ಈ ಮಧ್ಯೆ ತಾಂತ್ರಿಕ ತೊಂದರೆಯಿಂದ ಜನವರಿ 2019ರಂದು ಒಂದು ತಿಂಗಳು ಇ-ಕೆವೈಸಿ ಸ್ಥಗಿತವಾಗಿದೆ.

ಆದರೆ, ಐದು ತಿಂಗಳ ಅವ ಧಿಯಲ್ಲಿ ಇ-ಕೆವೈಸಿ ಅಡಿ ಇದುವರೆಗೆ 20,420 ಪಡಿತರ ಚೀಟಿ ಹಾಗೂ 65,041 ಪಡಿತರ ಸದಸ್ಯರು ಬಯೋಮೆಟ್ರಿಕ್‌ ದೃಢೀಕರಣ ಹೊಂದಿದ್ದಾರೆ. ಅಂದರೆ ಶೇ. 61.47ರಷ್ಟು ಪಡಿತರ ಚೀಟಿ ಹಾಗೂ ಶೇ. 57.79ರಷ್ಟು ಪಡಿತರ ಸದಸ್ಯರ ಇ-ಕೆವೈಸಿ ಪ್ರಗತಿಯಾಗಿದೆ. ಇನ್ನು ಶೇ. 40 ಪಡಿತರ ಚೀಟಿ ಹಾಗೂ ಶೇ. 43ರಷ್ಟು ಪಡಿತರ ಸದಸ್ಯರು ಇ-ಕೆವೈಸಿ ಹೊಂದಬೇಕಿದೆ. ಇಲ್ಲದಿದ್ದರೆ ಅಂತವರ ಪಡಿತರ ಚೀಟಿಗೆ ಆಹಾರ ಧಾನ್ಯ ನೀಡುವುದನ್ನು ಸ್ಥಗಿತಗೊಳಿಸಲಾಗುವುದು ಎನ್ನುವ ಆಹಾರ ಇಲಾಖೆಯ ಆತಂಕ ಪಡಿತರದಾರರನ್ನು ಕಾಡುತ್ತಿದೆ.

ಹೀಗಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆ ಮುಗಿಬಿದ್ದಿರುವ ಪಡಿತರದಾರರು ಬಯೋಮೆಟ್ರಿಕ್‌ ದೃಢಿಕರಣಕ್ಕೆ ದುಂಬಾಲು ಬಿದ್ದಿದ್ದಾರೆ. ಆದರೆ, ಸರ್ವರ್‌ ಸಮಸ್ಯೆಗೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಪಡಿತರದಾರರು ಸುಸ್ತೋ..ಸುಸ್ತು. ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ನಿತ್ಯ ಹತ್ತಾರು ಕಾರ್ಡ್‌ದಾರರು ದೃಢಿಕರಣ ಹೊಂದಲು ಆಗುತ್ತಿಲ್ಲ.

ಇ-ಕೆವೈಸಿಯಲ್ಲಿ ಬೀಳಗಿ ದ್ವಿತೀಯ: ಪಟ್ಟಣದಲ್ಲಿ 260 ಅಂತ್ಯೋದಯ, ಗ್ರಾಮೀಣ 4521 ಹಾಗೂ ಪಟ್ಟಣದಲ್ಲಿ ಬಿಪಿಎಲ್‌ 3264 ಹಾಗೂ ಗ್ರಾಮೀಣ 25173 ಮತ್ತು ಪಟ್ಟಣದಲ್ಲಿ ಎಪಿಎಲ್‌ 649 ಹಾಗೂ ಗ್ರಾಮೀಣ ಭಾಗದಲ್ಲಿ 7262 ಸೇರಿತಾಲೂಕಿನಾದ್ಯಂತ ಒಟ್ಟು 36,956 ಪಡಿತರ ಚೀಟಿ ಮತ್ತು 1,12,549 ಪಡಿತರ ಸದಸ್ಯರಿದ್ದಾರೆ. ಇನ್ನು, 16,536 ಪಡಿತರ ಚೀಟಿ ಮತ್ತು 47,508 ಪಡಿತರ ಸದಸ್ಯರು ಇ-ಕೆವೈಸಿ ಹೊಂದಬೇಕಿದೆ ಎಂದು ಆಹಾರ ನಿರೀಕ್ಷಕ ಎಂ.ಎಸ್‌.ಹುರಕಡ್ಲಿ ತಿಳಿಸಿದ್ದಾರೆ.

Advertisement

ಶೇ. 61.47 ಸಾಧನೆ ಮಾಡುವ ಮೂಲಕ ಇ-ಕೆವೈಸಿ ಪ್ರಗತಿಯಲ್ಲಿ ತಾಲೂಕು ಜಿಲ್ಲೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಶೇ. 63.05 ಸಾಧನೆ ಮಾಡಿದ ಮುಧೋಳ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. ಸರ್ವರ್‌ ಸಮಸ್ಯೆಯಾಗದಿದ್ದರೆ ಮಾತ್ರ ತ್ವರಿತಗತಿಯಲ್ಲಿ ಇ-ಕೆವೈಸಿ ಪೂರ್ಣಗೊಳ್ಳಲು ಸಾಧ್ಯ. ಇಲ್ಲದಿದ್ದರೆ ಇಲಾಖೆ ಅವಧಿ ವಿಸ್ತರಿಸುವುದು ಅನಿವಾರ್ಯ.

ಪಡಿತರ ಚೀಟಿ ಇ-ಕೆವೈಸಿ ಹೊಂದುವುದು ಕಡ್ಡಾಯ. ಇಲ್ಲದಿದ್ದರೆ ಅಂತಹ ಪಡಿತರ ಚೀಟಿಗೆ ಆಹಾರ ಧಾನ್ಯ ಪೂರೈಕೆ ಸ್ಥಗಿತಗೊಳ್ಳಲಿದೆ. ಸರ್ವರ್‌ ಸಮಸ್ಯೆ ಯಿಂದಾಗಿ ತೊಂದರೆಯಾಗಿದೆ. ಕಾರಣ, ಇ-ಕೆವೈಸಿ ಮಾಡಿಸಿಕೊಳ್ಳಲು ಇನ್ನಷ್ಟು ಅವ ಧಿ ವಿಸ್ತರಿಸಲಾಗುವುದು. ಎಲ್ಲ ಪಡಿತರದಾರರು ಇ-ಕೆವೈಸಿ ಹೊಂದಬೇಕು. ಶ್ರೀಶೈಲ ಕಂಕಣವಾಡಿ, ಉಪನಿರ್ದೇಶಕರು ಆಹಾರ ಇಲಾಖೆ, ಬಾಗಲಕೋಟೆ

 

-ರವೀಂದ್ರ ಕಣವಿ

Advertisement

Udayavani is now on Telegram. Click here to join our channel and stay updated with the latest news.

Next