Advertisement

Serious charge: ಸೆಬಿಯಲ್ಲಿದ್ದೂ ಐಸಿಐಸಿಐನಿಂದ ಮಾಧವಿಗೆ ವೇತನ: ಕಾಂಗ್ರೆಸ್‌

01:31 AM Sep 03, 2024 | Team Udayavani |

ಹೊಸದಿಲ್ಲಿ: ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಸೆಬಿ ಸದಸ್ಯೆಯಾಗಿದ್ದಾಗ್ಯೂ ಅವರು ಐಸಿಐಸಿಐ ಬ್ಯಾಂಕ್‌ನಿಂದ ಸಂಬಳ ಪಡೆದಿದ್ದಾರೆಂದು ಕಾಂಗ್ರೆಸ್‌ ನಾಯಕ ಪವನ್‌ ಖೇರಾ ಆರೋಪಿಸಿದ್ದಾರೆ.

Advertisement

2014 ಮತ್ತು 2017ರ ಅವಧಿಯಲ್ಲಿ ಮಾಧವಿ ಅವರು ಐಸಿಐಸಿಐ ಬ್ಯಾಂಕ್‌ನಿಂದ ಒಟ್ಟು 16 ಕೋಟಿ 80 ಲಕ್ಷ ರೂ. ಸಂಬಳ ಪಡೆದಿ ದ್ದಾರೆ. ಸೆಬಿಯ ಪೂರ್ಣಾವಧಿಯ ಸದಸ್ಯರಾಗಿದ್ದು ಕೊಂಡು ನೀವು ಹೇಗೆ ಐಸಿಐಸಿಐನಿಂದ ಸಂಬಳ ಪಡೆದಿರಿ ಎಂದವರು ಪ್ರಶ್ನಿಸಿದ್ದಾರೆ.

ಅಲ್ಲದೇ ಪರೋಕ್ಷವಾಗಿ ಪ್ರಧಾನಿ ಮೋದಿ ಅವರತ್ತಲೂ ಬೊಟ್ಟು ಮಾಡಿದ್ದಾರೆ. ಸೆಬಿ ಮುಖ್ಯಸ್ಥರನ್ನು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವರ ನೇತೃತ್ವದ ಸಂಪುಟ ನೇಮಕಾತಿ ಸಮಿತಿ ನೇಮಕ ಮಾಡಿದೆ ಎಂದು ಹೇಳಿದ್ದಾರೆ.

ಅಮೆರಿಕದ ಹಿಂಡನ್‌ಬರ್ಗ್‌ ರಿಸರ್ಚ್‌ ವರದಿಯ ಬಿಡುಗಡೆಯಾದ ಹಿನ್ನೆಲೆಯಲ್ಲಿ ಸೆಬಿ ಮುಖ್ಯಸ್ಥೆ ಮಾಧವಿಯ ನಡೆಗಳ ಬಗ್ಗೆ ಸಾಕಷ್ಟು ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಮೂಡಿ ರುವ ಬೆನ್ನಲ್ಲೇ ಹೊಸ ಆರೋಪ ಕೇಳಿ ಬಂದಿರುವುದು ಈಗ ಮಹತ್ವ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.