Advertisement

Series Holiday ಹಿನ್ನೆಲೆ: ದೇಗುಲಗಳಲ್ಲಿ ಭಾರೀ ಜನಸ್ತೋಮ

11:47 PM Dec 24, 2023 | Team Udayavani |

ಮಂಗಳೂರು/ಉಡುಪಿ: ಸರಣಿ ರಜೆ ಹಿನ್ನೆಲೆಯಲ್ಲಿ ರವಿವಾರ ಕರಾವಳಿಯ ವಿವಿಧ ಪ್ರಮುಖ ದೇವಸ್ಥಾನಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ, ಸೌತಡ್ಕ ಶ್ರೀ ಮಹಾಗಣಪತಿ, ಉಡುಪಿ ಶ್ರೀಕೃಷ್ಣ ಮಠ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಕೊಲ್ಲೂರು ಶ್ರೀ ಮುಕಾಂಬಿಕಾ ದೇಗುಲ ಸೇರಿದಂತೆ ಮಲ್ಪೆ, ಪಣಂಬೂರು ಬೀಚ್‌ಗಳಲ್ಲಿ ಭಾರೀ ಜನಸ್ತೋಮ ಕಂಡು ಬಂದಿದೆ.

Advertisement

ವಿವಿಧ ಕಡೆಗಳಿಗೆ ಆಗಮಿಸಿದ ಪ್ರವಾಸಿಗರು, ಭಕ್ತರು ದೇಗುಲಗಳಿಗೆ ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.

ಕುಕ್ಕೆಗೆ ಹರಿದು ಬಂದ ಭಕ್ತ ಸಾಗರ
ಸುಬ್ರಹ್ಮಣ್ಯ: ಕುಕ್ಕೆಗೆ ರವಿವಾರ ಭಾರೀ ಸಂಖ್ಯೆಯ ಭಕ್ತರ ದಂಡು ಹರಿದು ಬಂದಿತ್ತು. ಸಾವಿರಾರು ಮಂದಿ ಶ್ರೀ ದೇವರ ದರುಶನ ಪಡದು ಪ್ರಸಾದ ಸ್ವೀಕರಿಸಿದರು.

ಶುಕ್ರವಾರ ರಾತ್ರಿಯಿಂದಲೇ ಭಕ್ತರ ಆಗಮನ ಆರಂಭವಾಗಿತ್ತು. ಶ್ರೀ ದೇವರ ದರುಶನಕ್ಕಾಗಿ ಸ್ಕಂಧ ವಸತಿ ಗೃಹದ ಬಳಿಯಿಂದ ಭಕ್ತರು ಸರದಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು. ಸರತಿ ಸಾಲಿನಲ್ಲಿ ಮುನ್ನಡೆಯಲು ದೇಗುಲದ ವತಿಯಿಂದ ನೆರಳಿನ ಚಪ್ಪರದ ವ್ಯವಸ್ಥೆ ಮಾಡಿದುದರಿಂದ ಭಕ್ತರಿಗೆ ಹೆಚ್ಚಿನ ಅನುಕೂಲವಾಯಿತು.

ಭಾರೀ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇದ್ದುದರಿಂದ ದೇಗುಲದ ಆಡಳಿತ ಮಂಡಳಿ ವಿಶೇಷ ವ್ಯವಸ್ಥೆ ಮಾಡಿತ್ತು. ಷಣ್ಮುಖ ಪ್ರಸಾದ ಭೋಜನ ಶಾಲೆ ಮಾತ್ರವಲ್ಲದೆ ಆದಿಸುಬ್ರಹ್ಮಣ್ಯ ಭೋಜನ ಶಾಲೆಯಲ್ಲಿ ಬಫೆ ಮಾದರಿಯಲ್ಲಿ ಭೋಜನ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು.

Advertisement

ಅಧಿಕ ವಾಹನಗಳ ಆಗಮನ ದಿಂದಾಗಿ ಆಗಾಗ್ಗೆ ರಸ್ತೆಯಲ್ಲಿ ವಾಹನ ದಟ್ಟಣೆ ಕಂಡು ಬಂತು.

 

Advertisement

Udayavani is now on Telegram. Click here to join our channel and stay updated with the latest news.

Next