Advertisement

ಹುಣಸೂರಲ್ಲಿ ಸರಣಿ ಕಳ್ಳತನ: ಐದು ಕಡೆ ಕೇಬಲ್ ಕಳ್ಳತನ

07:45 PM Sep 18, 2022 | Team Udayavani |

ಹುಣಸೂರು: ತಾಲೂಕಿನಲ್ಲಿ ಕಳ್ಳರು ಕೈಚಳಕ ಆರಂಭಿಸಿದ್ದು, ನಗರದ ಬಜಾರ್ ರಸ್ತೆಯ ಅಂಗಡಿ, ಬಾರ್‌ಗಳ ಬೀಗ ಮುರಿದು ಹಣಕ್ಕಾಗಿ ತಡಕಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದ್ದರೆ, ನಗರಕ್ಕೆ ಸಮೀಪದ ಬೆಳ್ತೂರಿನ ಐದು ಪಂಪ್ ಸೆಟ್‌ಗಳ ಕೇಬಲ್ ಕಳ್ಳತನವಾಗಿದೆ.

Advertisement

ನಗರದ ಜನನಿಭಿಡ ಪ್ರದೇಶವಾದ ತಾ.ಪಂ.ಕಚೇರಿ ಮುಂಭಾಗದ ರೇಣುಕಾ ಬಾರ್ ಮತ್ತು ಬಜಾರ್ ರಸ್ತೆಯ ಚಾಮುಂಡೇಶ್ವರಿ ಬಾರ್ ಅಂಡ್ ರೆಸ್ಟೋರೆಂಟ್, ಟಿ.ಪಿ.ಸ್ಟೋರ್, ಇದರ ಪಕ್ಕದ ಟೀ ಅಂಗಡಿಗಳ ಬೀಗ ಒಡೆದ ಕಳ್ಳರು ಹಣಕಾಸಿಗಾಗಿ ತಡಕಾಡಿ ಬೀಡಿ-ಸಿಗರೇಟು, 800ರೂ. ಕದ್ದು ಪರಾರಿಯಾಗಿದ್ದರೆ,ಇನ್ನು ಕೃಷ್ಣಬೇಕರಿ ಬೀಗ ಒಡೆದು ಒಳಕ್ಕೆ ಹೋಗಲಾಗದೆ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.

ವಿಷಯ ತಿಳಿದ ಇನ್ಸ್  ಪೆಕ್ಟರ್ ಶ್ರೀನಿವಾಸ್, ಎಸ್.ಐ.ಲೋಕೇಶ್ ಸಿ.ಸಿ.ಕ್ಯಾಮರಾ ಪುಟೇಜ್ ಪರಿಶೀಲನೆ ನಡೆಸಿದ್ದಾರೆ.

ಐದು ಕಡೆ ಕೇಬಲ್ ಕಳ್ಳತನ:

ತಾಲೂಕಿನ ಕಸಬಾ ಹೋಬಳಿಯ ಬೆಳ್ತೂರು ಗ್ರಾಮದ ಗಜೇಂದ್ರ, ಬಸವರಾಜು, ಶಿವಲಿಂಗಾಚಾರಿ,ರಾಜೇಶ್, ಚಂದ್ರು ಎಂಬುವವರಿಗೆ ಸೇರಿದ ಜಮೀನಿನಲ್ಲಿದ್ದ ಬೋರ್‌ವೆಲ್‌ನ ಸಬ್ ಮರ್ಸಿಬಲ್ ಪಂಪ್ ಸೆಟ್‌ಗೆ ಅಳವಡಿಸಿದ್ದ ಸುಮಾರು 100 ಮೀಟರ್‌ನಷ್ಟು ಕೇಬಲ್ ಕಟ್ ಮಾಡಿ ಹೊತ್ತೊಯ್ದಿದ್ದಾರೆ.

Advertisement

ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಎಸ್.ಐ ಜಮೀರ್ ಅಹಮದ್, ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next