Advertisement

ಒಂದೇ ವಾರದಲ್ಲಿ ಮೂರು ಕೊಲೆ: ದುರ್ಬಲ ಎಂದು ಹಂಗಿಸಿದ್ದಕ್ಕೆ ಸರಣಿ ಹಂತಕನಾದ ಯುವಕ!

11:40 AM Dec 05, 2020 | Nagendra Trasi |

ನವದೆಹಲಿ:ಒಂದೇ ವಾರದಲ್ಲಿ ಮೂರು ಕೊಲೆ ಕೃತ್ಯ ಎಸಗಿದ್ದ 22 ವರ್ಷದ ಸರಣಿ ಹಂತಕ ಯುವಕನನ್ನು ಗುರುಗ್ರಾಮ್ ಪೊಲೀಸರು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಆರೋಪಿಯನ್ನು ಬಿಹಾರದ ನಿವಾಸಿ ಮೊಹಮ್ಮದ್ ರಾಜಿ ಎಂದು ಗುರುತಿಸಲಾಗಿದೆ. ಈತನನ್ನು ಗುರುವಾರ ರಾತ್ರಿ ಗುರುಗ್ರಾಮದ ಐಎಫ್ ಎಫ್ ಸಿಒ ಚೌಕ್ ಸಮೀಪ ಬಂಧಿಸಲಾಗಿತ್ತು ಎಂದು ವರದಿ ಹೇಳಿದೆ.

ವಿಚಾರಣೆ ಸಂದರ್ಭದಲ್ಲಿ ಆರೋಪಿ ಮೊಹಮ್ಮದ್, ತಾನು ನವೆಂಬರ್ 23, 24 ಹಾಗೂ 25ರಂದು ಮೂರು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ. ಪೊಲೀಸರ ಹೇಳಿಕೆ ಪ್ರಕಾರ ಆರೋಪಿ, ಮದ್ಯಪಾನದ ಆಮಿಷವೊಡ್ಡಿ ನಂತರ ಚೂರಿಯಿಂದ ಇರಿದು ಹತ್ಯೆಗೈಯುತ್ತಿದ್ದ ಎಂದು ವಿವರಿಸಿದ್ದಾರೆ.

ನವೆಂಬರ್ 23ರಂದು ಗುರುಗ್ರಾಮದ ಲೀಜರ್ ವ್ಯಾಲಿ ಪಾರ್ಕ್ ನಲ್ಲಿ ವ್ಯಕ್ತಿಯೊಬ್ಬನನ್ನು ಇರಿದು ಕೊಂದಿದ್ದ. ನವೆಂಬರ್ 24ರಂದು ಗುರುಗ್ರಾಮ್ ಸೆಕ್ಟರ್ 40ರಲ್ಲಿ ಸೆಕ್ಯುರಿಟಿ ಗಾರ್ಡ್ ನನ್ನು ಹತ್ಯೆಗೈದಿದ್ದ. ನಂತರ ನ.25ರಂದು 26ವರ್ಷದ ರಾಕೇಶ್ ಕುಮಾರ್ ಎಂಬಾತನನ್ನು ತಲೆ ಕಡಿದು ಹತ್ಯೆಗೈದಿದ್ದ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:ಹೈದರಾಬಾದ್ ಫಲಿತಾಂಶ: ಟಿಆರ್ ಎಸ್ ಬಹುಮತಕ್ಕೆ ಬಿಜೆಪಿ ಬ್ರೇಕ್, AIMIM, TRS ಮೈತ್ರಿ

Advertisement

“ತನಗೆ ಚಿಕ್ಕಂದಿನಿಂದಲೂ ನನಗೆ ಏನೂ ತಿಳಿದಿಲ್ಲವಾಗಿತ್ತು. ಪ್ರತಿಯೊಬ್ಬರು ನನಗೆ ನೀನು ತುಂಬಾ ದುರ್ಬಲ, ನಿನ್ನಿಂದ ಏನು ಮಾಡಲು ಸಾಧ್ಯ ಎಂದು ಹೇಳುತ್ತಿದ್ದರು. ಹೀಗಾಗಿ ನಾನು ಏನು ಮಾಡುತ್ತೇನೆ ಎಂಬುದನ್ನು ಜಗತ್ತು ನೋಡಲಿ ಎಂದು ಈ ಕೃತ್ಯಗಳನ್ನು ಎಸಗಿದ್ದೇನೆ” ಎಂಬುದಾಗಿ ಮೊಹಮ್ಮದ್ ತನಿಖಾಧಿಕಾರಿಗಳು ಮುಂದೆ ವಿಚಾರಣೆ ವೇಳೆ ತಿಳಿಸಿರುವುದಾಗಿ ವರದಿ ವಿವರಿಸಿದೆ.

ಈ ಸರಣಿ ಹಂತಕನ ಬಂಧನಕ್ಕಾಗಿ ಪೊಲೀಸರು ಸುಮಾರು 300 ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆ ನಡೆಸಿದ್ದರು. ಅಷ್ಟೇ ಅಲ್ಲ ಆರೋಪಿ ದೆಹಲಿ, ಗುರುಗ್ರಾಮ್ ಮತ್ತು ಬಿಹಾರಗಳಲ್ಲಿ ಕನಿಷ್ಠ ಹತ್ತು ಕೊಲೆ ಪ್ರಕರಣಗಳಲ್ಲಿ ಶಾಮೀಲಾಗಿದ್ದು ಈ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next