ಹೆಬ್ರಿ: ಹೆಬ್ರಿ -ಆಗುಂಬೆ ರಾಷ್ಟ್ರೀಯ ಹೆದ್ದಾರಿಯ ಸೀತಾನದಿ ಜಕ್ಕನಮಕ್ಕಿ ಬಳಿ ಟಿಪ್ಪರ್ಹಾಗೂ ಈಚರ್ ವಾಹನ ನಡುವೆ ನಡೆದ ಅಪಘಾತದಲ್ಲಿ ಈಚರ್ಚಾಲಕ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಶನಿವಾರ ನಡೆದಿದೆ.
ಸಂಜೆ 7 ಗಂಟೆ ಸುಮಾರಿಗೆ ಆಗುಂಬೆ ಕಡೆಯಿಂದ ಬರುತ್ತಿದ್ದ ಈಚರ್ವಾಹನ ಎದುರುಗಡೆಯಿಂದ ಬಂದ ಟಿಪ್ಪರ್ಗೆ ಢಿಕ್ಕಿ ಹೊಡೆದ ಪರಿಣಾಮ ಈಚರ್ ಚಾಲಕ ಕೊಪ್ಪ ಮೂಲದ ಬಾಲಕೃಷ್ಣ (58) ಮೃತಪಟ್ಟರು. ಟಿಪ್ಪರ್ ಹಿಂದೆ ಬರುತ್ತಿದ್ದ ಕಾರುಗಳು ಸರಣಿಯಾಗಿ ಢಿಕ್ಕಿ ಹೊಡೆದು ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು.
ಅಪಘಾತದ ತೀವ್ರತೆಯಿಂದ ಈಚರ್ ಲಾರಿ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಚಾಲಕನನ್ನು ಹೊರ ತೆಗೆಯಲು ಠಾಣಾಧಿಕಾರಿ ಸುದರ್ಶನ ದೊಡ್ಡಮನಿ ಹಾಗೂ ನಿರಂಜನ್ ಹೆಗ್ಡೆ ಸೇರಿದಂತೆ ಪೊಲೀಸರು ಹಾಗೂ ಸ್ಥಳೀಯರು ಹರ ಸಾಹಸ ಪಟ್ಟರು.
ಅಪಘಾತ ನಡೆದ ಸ್ಥಳ ತೀರ ಕಡಿದಾಗಿದ್ದು ವಾಹನ ಸಂಚಾರಕ್ಕೆ ಅವಕಾಶವಿರದೆ ಟ್ರಾಫಿಕ್ ಜಾಮ್ ಆಗಿತ್ತು. ಭಾರಿ ಮಳೆಯ ನಡುವೆ ಸ್ಥಳೀಯರು ಹಾಗೂ ಪೊಲೀಸ್ ಅಧಿಕಾರಿಗಳು ರಸ್ತೆ ತೆರವು ಮಾಡುವಲ್ಲಿ ಶ್ರಮಿಸಿದರು.
ಇದೇ ಪರಿಸರದಲ್ಲಿ ಕಳೆದ ವಾರವಷ್ಟೇ ಅಪಘಾತವಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.