Advertisement
ಕ್ವಾರ್ಟರ್ ಫೈನಲ್‌ನಲ್ಲಿ ಮರಿಯಾ ಸಕ್ಕರಿ ಅಮೆರಿಕದ ಜೊಹಾನಾ ಕೊಂಟಾ ಅವರನ್ನು ಎದುರಿಸಲಿದ್ದಾರೆ. ಉಳಿದ ಪಂದ್ಯಗಳಲ್ಲಿ ನವೋಮಿ ಒಸಾಕಾ-ಅನೆಟ್ ಕೊಂಟಾವೀಟ್; ವಿಕ್ಟೋರಿಯಾ ಅಜರೆಂಕಾ-ಓನ್ಸ್ ಜಾಬರ್; ಜೆಸ್ಸಿಕಾ ಪೆಗುಲಾ-ಎಲಿಸ್ ಮಾರ್ಟೆನ್ಸ್ ಮುಖಾಮುಖಿ ಆಗುವರು.ಜೊಕೋ ಓಟ, ಮರ್ರೆ ಮನೆಗೆ
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ನಂ.1 ಟೆನಿಸಿಗ ನೊವಾಕ್ ಜೊಕೋವಿಕ್ ಕ್ವಾರ್ಟರ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆ್ಯಂಡಿ ಮರ್ರೆ ಪರಾಭವಗೊಂಡಿದ್ದಾರೆ. ಅಮೆರಿಕದ ಶ್ರೇಯಾಂಕ ರಹಿತ ಆಟಗಾರ ಟೆನ್ನಿಸ್ ಸ್ಯಾಂಡ್‌ಗ್ರೆನ್ ಅವರನ್ನು ಜೊಕೋವಿಕ್ 6-2, 6-4 ಅಂತರದಿಂದ ಮಣಿಸಿದರು. ಇದರೊಂದಿಗೆ 2020ರಲ್ಲಿ ಜೊಕೋ 20-0 ಅಜೇಯ ದಾಖಲೆ ಬರೆದಂತಾಯಿತು. ಅವರ ಮುಂದಿನ ಎದುರಾಳಿ ಜರ್ಮನಿಯ ಜಾನ್ ಲೆನಾರ್ಡ್ ಸ್ಟಫ್. ಬೆಲ್ಜಿಯಂನ ಡೇವಿಡ್ ಗೊಫಿನ್ ವಿರುದ್ಧ ಅವರು 6-4, 3-6, 6-4ರಿಂದ ಗೆದ್ದು ಬಂದರು.