Advertisement

ಸೆರೆನಾಗೆ ಸೋಲಿನ ಆಘಾತ

08:41 PM Aug 11, 2022 | Team Udayavani |

ಟೊರಂಟೊ: ನ್ಯಾಶನಲ್‌ ಬ್ಯಾಂಕ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ ದ್ವಿತೀಯ ಸುತ್ತಿನಲ್ಲಿ ಸೆರೆನಾ ವಿಲಿಯಮ್ಸ್‌ ಸೋಲನುಭವಿಸಿದ್ದಾರೆ.

Advertisement

ಅವರನ್ನು ಸ್ವಿಜರ್ಲೆಂಡ್‌ನ‌ ಬೆಲಿಂಡಾ ಬೆನ್ಸಿಕ್‌ 6-2, 6-4 ನೇರ ಸೆಟ್‌ಗಳಿಂದ ಮಣಿಸಿದರು.

ಟೆನಿಸ್‌ ವಿದಾಯದ ಹೇಳಿಕೆ ನೀಡಿದ ಬಳಿಕ ಸೆರೆನಾ ಪಾಲ್ಗೊಂಡ ಮೊದಲ ಪಂದ್ಯಾವಳಿ ಇದಾಗಿದೆ. ಈ ಸೋಲಿನಿಂದ ಸೆರೆನಾ ಅವರ ನಿವೃತ್ತಿ ಸಮೀಪಿಸಿದೆ ಎಂದು ಭಾವಿಸಲಡ್ಡಿಯಿಲ್ಲ.

ಗುರುವಾರದ ಪಂದ್ಯಗಳಲ್ಲಿ ಅರಿನಾ ಸಬಲೆಂಕಾ, ಜಿಲ್‌ ಟೀಶ್ಮನ್‌, ಯುಲಿಯಾ ಪುಟಿತ್ಸೇವಾ ಮೊದಲಾದವರು ಗೆಲುವು ಸಾಧಿಸಿ ಪ್ರೀಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next