ಮುಂಬಯಿ: ಪಾಕಿಸ್ಥಾನ ಆರ್ಥಿಕತೆ ಪಾಪರ್ ಆಗಿರುವುದು ಗೊತ್ತಿರೋದೆ. ಆದರೆ ಈಗ ಗೂಗಲ್ ಇಮೇಜ್ ಸರ್ಚ್ ಎಂಜಿನ್‌ನಲ್ಲೂ ಭಿಕಾರಿ ಅಥವಾ ಬೆಗ್ಗರ್ ಎಂದು ಬರೆದು ನೋಡಿದರೆ ಅದು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಫೋಟೋವನ್ನೇ ತೋರಿಸುತ್ತದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ಥಾನವ ವಿರುದ್ಧ ಅಪಹಾಸ್ಯದ ವಸ್ತುವಾಗಿದೆ.
ಇದಕ್ಕೂ ಮೊದಲು, ಪುಲ್ವಾಮಾ ದಾಳಿ ಬಳಿಕ ವಿಶ್ವದಲ್ಲೇ ಅತಿ ಉತ್ತಮ ಟಾಯ್ಲೆಟ್ ಪೇಪರ್ ಯಾವುದು ಎಂದು ಗೂಗಲ್‌ಗೆ ಕೇಳಿದ್ದರೆ ಅದು ಪಾಕಿಸ್ಥಾನದ ಧ್ವಜ ತೋರಿಸುತ್ತಿತ್ತು.
ಹಾಗೆಯೇ ಕಳೆದ ವರ್ಷ ಈಡಿಯೆಟ್ ಎಂದು ಗೂಗಲ್‌ನಲ್ಲಿ ಟೈಪ್ ಮಾಡಿದ್ದರೆ, ಅದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನ್ನು ತೋರಿಸುತ್ತಿತ್ತು.
ಇದು ಗೂಗಲ್ ಸರ್ಚ್ ಎಂಜಿನ್‌ನಲ್ಲಿನ ಕಾಂಪ್ಲೆಕ್ಸ್ ಆಲ್ಗರಿತಮ್ ವ್ಯವಸ್ಥೆಯಿಂದಾಗಿ ಹೀಗಾಗುತ್ತದೆ.